UDUPI : ಅವ್ಯವಸ್ಥೆ ಆಗರವಾಗಿರುವ ಸೈಂಟ್ ದ್ವೀಪ : ಪ್ರಶ್ನಿಸಿದ ಪ್ರವಾಸಿಗನ ವಿರುದ್ಧವೇ ದರ್ಪ ತೋರಿದ ಸಿಬ್ಬಂದಿ
Tuesday, January 17, 2023
ಅವ್ಯವಸ್ಥೆ ಆಗರವಾಗಿರುವ ಉಡುಪಿಯ ಸೈಂಟ್ ಮೇರಿಸ್ ದ್ವೀಪದ ನಿರ್ವಹಣಾ ವಿರುದ್ಧ ಪ್ರವಾಸಿಗರೊಬ್ಬರು ಆಕ್ರೋಶ ಹೊರ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈಂಟ್ ಮೇರಿಸ್ ದ್ವೀಪಕ್ಕೆ ಯೂಟ್ಯೂಬರ್ ಒಬ್ಬರು ಬಂದಿದ್ದರು. ಬರುವಾಗಲೇ, ಪ್ರವೇಶದ ಸೀ ವಾಕ್‌ನಲ್ಲಿ ಕ್ಯಾಮರಾ ಪ್ರವೇಶಕ್ಕೆ ಅಂತ ಹಣ ಪಾವತಿ ಮಾಡಿದ್ದರು.
ನಂತರ ಸೈಂಟ್ ಮೇರಿಸ್ ದ್ವೀಪಕ್ಕೆ ಬರುವಾಗ, ಪ್ರವೇಶ ದ್ವಾರದಲ್ಲಿ ಕ್ಯಾಮರಾ ಒಳಗೆ ತೆಗೆದುಕೊಂಡು ಹೋಗುದನ್ನು ನಿರಾಕರಣೆ ಮಾಡಿದ್ದಾನೆ. ಅಲ್ಲದೇ ಲಗೇಜು ರೂಮ್‌ನಲ್ಲಿ ಇಡುದಕ್ಕೂ ಶುಲ್ಕ ಕೇಳಿದ್ದಾನೆ. ಆಗ ಪ್ರವಾಸಿಗ ಸುರಕ್ಷತೆಯನ್ನ ಪ್ರಶ್ನೆ ಮಾಡಿದ್ದು, ಬಾಗಿಲೇ ಇಲ್ಲದ ರೂಮ್‌ನಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರಾ ಇಡುವ ಬಗ್ಗೆ ಹೇಗೆ ಅಂತ ಕೇಳಿದ್ದಾರೆ. ಆಗ ನಿರ್ವಹಣಾ ಸಿಬ್ಬಂದಿ ಕ್ಯಾಮರವನ್ನೇ ತೆಗೆದು ಬಿಸಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ. ಈ ವೇಳೆ ಪ್ರವಾಸಿಗರು ಹಾಗೂ ನಿರ್ವಹಣಾ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದ್ದು, ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಮಲ್ಪೆ ಪ್ರವಾಸಿತಾಣಗಗಳು ಅವ್ಯವಸ್ಥೆ ಆಗರ ಆಗಿದ್ದರೂ ಜಿಲ್ಲಾಡಳಿತ ಮಾತ್ರ ಮೌನವೇ ಆಗಿದೆ.