UDUPI ; ಉಡುಪಿಗೂ ಬಂದಿದ್ದನಂತೆ ಸ್ಯಾಂಟ್ರೋ ರವಿ..!
Thursday, January 12, 2023
ಪೊಲೀಸರ ಕೈಗೆ ಸಿಗದೆ ನಾಪತ್ತೆ ಆಗಿರುವ ಸ್ಯಾಂಟ್ರೋ ರವಿ ಉಡುಪಿಗೂ ಬಂದಿದ್ದನಂತೆ. ಹೀಗಾಗಿ ಮೈಸೂರು ಪೊಲೀಸರ ತಂಡ ಉಡುಪಿಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.
ಹೆಬ್ರಿಯಿಂದ ಆಗುಂಬೆ ತೆರಳುವ ರಸ್ತೆಯಲ್ಲಿರುವ ರಮೇಶ್ ಕುಲಾಲ್ ಅವರಿಗೆ ಸೇರಿದ ಗೂಡಂಗಡಿಗೆ ಭೇಟಿ ನೀಡಿದ ರವಿ, ರಮೇಶ್ ಕುಲಾಲ್ ಬಳಿ ಮೊಬೈಲ್ ಪಡೆದು ಕರೆ ಮಾಡಿದ್ದ ಎನ್ನಲಾಗಿದೆ ಈ ಹಿನ್ನಲೆಯಲ್ಲಿ ಮೈಸೂರು ಪೊಲೀಸರು ತನಿಖೆ ನಡೆಸಿದ್ದು, ಮೂರು ದಿನಗಳ ಹಿಂದೆ ರಮೇಶ್ ಕುಲಾಲ್ ನನ್ನ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ. ರಾತ್ರಿಯ ವರೆಗೆ ವಿಚಾರಣೆ ನಡೆಸಿ, ಮೊಬೈಲ್ ವಶಕ್ಕೆ ಪಡೆದು ಕಳುಹಿಸಿದ್ದಾರಂತೆ. ಸದ್ಯ ಸ್ಯಾಂಟ್ರೋ ರವಿ, ಹೆಬ್ರಿಯಿಂದ ಆಗುಂಬೆ ಮೂಲಕ ಶಿವಮೊಗ್ಗ ಕಡೆ ಹೋಗಿರುವ ಸಾಧ್ಯತೆ ಇದೆ.