-->

UDUPI ; ಪಚ್ಚು ಅಂದ್ರೆ ನೀನೇನಾ ಅಂತ ಹೇಳಿ  ಪಬ್‌ನಲ್ಲಿ ಹೊಡಿ ಬಡಿ ಗಲಾಟೆ..!

UDUPI ; ಪಚ್ಚು ಅಂದ್ರೆ ನೀನೇನಾ ಅಂತ ಹೇಳಿ ಪಬ್‌ನಲ್ಲಿ ಹೊಡಿ ಬಡಿ ಗಲಾಟೆ..!

ಉಡುಪಿಯ ಪಬ್‌ವೊಂದರಲ್ಲಿ ಗಲಾಟೆ ನಡೆದಿದ್ದು, ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.ಉಡುಪಿಯ ಕಾಡಬೆಟ್ಟುವಿನ ಪ್ರಶಾಂತ್‌ ಅವರು  80 ಬಡಗಬೆಟ್ಟುವಿನ, ಪಬ್‌ನಲ್ಲಿರುವಾಗ ಅಪರಿಚಿತರು ಬಂದು “ಪಚ್ಚು ಎಂದರೆ ನೀನೇನಾ? ಹೊರಗೆ ಬಾ ಎಂದು ಹೇಳಿ ಹೊರಗೆ  ಹೋದಾಗ ಪ್ರಶಾಂತ್‌ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. 
ಈ ವೇಳೆ ಪರಿಚಯದ ರತನ್‌ ಮತ್ತು ಇತರ ಇಬ್ಬರು ಸೇರಿ ಪ್ರಶಾಂತ್‌ ಅವರ ತಲೆಗೆ, ಮುಖಕ್ಕೆ, ಬೆನ್ನಿಗೆ ಬೇಸ್‌ ಬ್ಯಾಟ್‌ ನಿಂದ ಹಲ್ಲೆ ಮಾಡಿದ್ದಾರೆ. ಮತ್ತೋರ್ವ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಈ ವೇಳೆ ಜನ ಸೇರಿದಾಗ ಆರೋಪಿಗಳು ಪ್ರಶಾಂತ್‌ನಿಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಗಲಾಟೆ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99