
ದ. ಕ ಜಿಲ್ಲಾ SP ವರ್ಗಾವಣೆ-ಅಮಾಥೆ ವಿಕ್ರಮ್ ನೂತನ ಎಸ್ ಪಿ
Tuesday, January 31, 2023
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು
ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಯಾಗಿದ್ದ ಸೋನಾವಾಣೆ ಋಷಿಕೇಷ್ ಭಗವಾನ್
ಅವರನ್ನು ವರ್ಗಾವಣೆ ಮಾಡಲಾಗಿದ್ದು , ಅವರನ್ನು ಗುಪ್ತಚರ
ವಿಭಾಗದ ಎಸ್ ಪಿ ಯಾಗಿ ನಿಯುಕ್ತಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಎಸ್ ಪಿ ಯಾಗಿ ಅಮಾಥೆ ವಿಕ್ರಮ್ ಅವರನ್ನು ನೇಮಕ ಮಾಡಲಾಗಿದೆ. ಅಮಾಥೆ ವಿಕ್ರಮ್
ಅವರು ಗುಪ್ತಚರ ವಿಭಾಗದ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.