-->

 ಬೆಳ್ತಂಗಡಿ :ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ - ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ

ಬೆಳ್ತಂಗಡಿ :ಯುವತಿಯ ಬೆತ್ತಲೆ ಜಗತ್ತಿನಲ್ಲಿ ಸಿಲುಕಿಕೊಂಡ ಯುವಕ - ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ

ಮಂಗಳೂರು: ಕರಾವಳಿಯಲ್ಲಿ ಬ್ಲಾಕ್ ಮೇಲ್ ಜಾಲ ಬೀಡುಬಿಟ್ಟಿದ್ದು, ಈ ಜಾಲಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರೇ ಈ ಬ್ಲಾಕ್‌ಮೇಲ್ ತಂಡದ ಟಾರ್ಗೆಟ್. ಇವರ ತಂಡದ ಸುಂದರ ಯುವತಿಯ ಅಂಗಾಗ ನೋಡಿ ಜೊಲ್ಲು ಸುರಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.
ಇದೇ ಗ್ಯಾಂಗ್ ನಿಂದಾಗಿ ಅಮಾನಯಕ ಯುವಕನೊಬ್ಬನ ಪ್ರಾಣ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಬೆಳ್ತಂಗಡಿ ಗುರುದೇವ ಕಾಲೇಜ್ ನಲ್ಲಿ 2ನೇ ವರ್ಷದ ಬಿ.ಕಾಂ ಪದವಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದ ಹರ್ಷಿತ್ (19) ಈ ಜಾಲಕ್ಕೆ ಬಿದ್ದು ಬ್ಲಾಂಕ್‌ಮೇಲ್ ಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವತಿಯ ಬೆತ್ತಲೆ ಜಗತ್ತಿಗೆ ಸಿಲುಕಿ ಬಳಿಕ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ಯುವತಿ ಸಂಪರ್ಕಕ್ಕೆ ಬಂದಿದ್ದಾಳೆ. ಇನ್ಯಾ ಗ್ರಾಂ ಮೂಲಕ ಚಾಟಿಂಗ್ ಮಾಡಿಕೊಂಡಿದ್ದು, ನಂತರ ಹರ್ಷಿತ್ ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿದ್ದಾಳೆ. 


3 ಸೆಕಂಡ್‌ಗಳಲ್ಲಿ ವಿಡಿಯೋ ಕಾಲ್ ನ್ನು ಹರ್ಷಿತ ಕಟ್ ಮಾಡಿದ್ದಾನೆ. ನಂತರ ಯುವಕನೊಬ್ಬ ಕರೆ ಮಾಡಿ ನಿನ್ನ ವೈಯಕ್ತಿಕ ವಿಡಿಯೋ ನನ್ನ ಬಳಿ ಇದೆ. ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ ಎಂದು ಬ್ಲಾಂಕ್‌ಮೇಲ್ ಮಾಡಿದ್ದಲ್ಲದೆ ವೈರಲ್ ಮಾಡಬಾರದು ಎಂದಾದರೆ 11,000 ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.

ಹರ್ಷಿತ್ ಹಣ ಕೊಡಲು ಜನವರಿ 23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದ ಆದರೆ ಹರ್ಷಿತ್‌ಗೆ ಹಣ ಕೊಡಲು ಆಗಿಲ್ಲ. ಇತ್ತ ಆ ವಿಡಿಯೋ ವೈರಲ್ ಮಾಡಿದರೆ ಮಾನ ಹೋಗುತ್ತೆ ಎಂದು ಮರ್ಯಾದೆಗೆ ಹೆದರಿನ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಬಳಿಕ ಯುವಕನನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಜ.30) ಮೃತಪಟ್ಟಿದ್ದಾನೆ.

ಈ ಜಾಲಕ್ಕೆ ಸಿಲುಕಿದ್ದು ಹರ್ಷಿತ್ ಮಾತ್ರವಲ್ಲ. ಆತನ ಮೂವರು ಸ್ನೇಹಿತರು ಕೂಡ ಇದೇ ರೀತಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದರು. ಅಪರಿಚಿತ ಹುಡುಗಿ ವಿಡಿಯೋ ಕಾಲ್ ಮಾಡುತ್ತಾಳೆ. ಆಗ ಆಕೆ ಬೆತ್ತಲಾಗಿರುತ್ತಾಳೆ. ಆಕೆಯ ಮುಖ ಕಾಣುತ್ತಿರೋದಿಲ್ಲ. ವಿಡಿಯೋ ಕಾಲ್ ರಿಸೀವ್ ಮಾಡಿ ಅಲ್ಲಿ ಏನು ಕಾಣುತ್ತಿದೆ ಎಂದು ನೋಡುವಷ್ಟರಲ್ಲೇ ಕಾಲ್ ಕಟ್ ಆಗುತ್ತೆ. ಅಪರಿಚಿತಳ ಮೊಬೈಲ್ ನಲ್ಲಿ ಇವರ ಮುಖ ಸೆರೆಯಾಗಿರುತ್ತೆ. ಅದರ ಸ್ಮಿನ್ ಶಾಟ್ ಮತ್ತು ರೆಕಾರ್ಡ್ ಮಾಡಿಕೊಂಡು ಅದನ್ನೇ ದಾಳವಾಗಿ ಮಾಡಿಕೊಳ್ಳುವುದು ಈ ತಂಡ ಮಾಡುತ್ತಿದೆ.


ಹೀಗೆ ಇವರಿಂದ ಮೋಸ ಹೋದವರು ಅದೆಷ್ಟೋ ಬಾರೀ ಸಾಕಷ್ಟು ಹಣವನ್ನು ಅವರ ಖಾತೆಗೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಇದೇ ರೀತಿ ಮೋಸವಾಗಿದೆ.


 ಕೆಲವರು ಹಣ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ಕೆಲವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೋನ್ ನಂಬರ್ ಮತ್ತು ಅಕೌಂಟ್ ಡಿಟೇಲ್ಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಈ ಕಿರಾತಕರ ಜಾಲಕ್ಕೆ ಒಂದು ಅಮಾಯಕ ಪ್ರಾಣ ಬಲಿಯಾಗಿರುವುದು ನಿಜಕ್ಕೂ ದುರಂತ. ಇನ್ನಾದರೂ ಯುವಕರು ಇಂತಹ ಜಾಲಕ್ಕೆ ಬಲಿಯಾಗದೆ, ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಹಿಸುವುದು ಅತೀ ಅಗತ್ಯ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99