ನಟ ಲಕ್ಷ್ಮಣ್ ಪಾರ್ಥಿವ ಶರೀರದ ಮುಂದೆ ಮೌನವಾಗಿ ನಿಂತ ಗೆಳೆಯ, ನಟ ಶ್ರೀನಿವಾಸಮೂರ್ತಿ
Monday, January 23, 2023
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ ಅವರು ಹೃದಯಾಘಾತದಿಂದ ಬೆಳಗ್ಗೆ ಸುಮಾರು 4 ಗಂಟೆಗೆ ಅಸುನೀಗಿದ್ದಾರೆ. ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಗೆಳೆಯ, ನಟ ಶ್ರೀನಿವಾಸಮೂರ್ತಿ ಅವರು ಲಕ್ಷ್ಮಣ್ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಗೆಳೆಯ ಪಾರ್ಥಿವ ಶರೀರದ ಮುಂದೆ ಶ್ರೀನಿವಾಸಮೂರ್ತಿ ಕೆಲ ಕಾಲ ಮೌನವಾಗಿ ನಿಂತು ಸಂತಾಪ ಸೂಚಿಸಿದರು.
ನಟ ಲಕ್ಷ್ಮಣ್ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅಂಬರೀಶ್, ವಿಷ್ಣುವರ್ಧನ್, ಅಭಯ್ ಬಹಳಷ್ಟು ಚಿತ್ರಗಳಲ್ಲಿ ಲಕ್ಷ್ಮಣ್ ಅಭಿನಯಿಸಿದ್ದರು. ಹಾಲುಂಡ ತವರು ಚಿತ್ರದಲ್ಲಿ ನಾಯಕಿ ಅಣ್ಣನ ಪಾತ್ರ ಲಕ್ಷ್ಮಣ್‌ಗೆ ಬಹಳ ಖ್ಯಾತಿ ತಂದುಕೊಟ್ಟಿತ್ತು. ಯಜಮಾನ, ಸೂರ್ಯವಂಶ, ಮಲ್ಲ ಚಿತ್ರಗಳಲ್ಲಿನ ಇವರ ಪಾತ್ರ ನೆನಪಿನಲ್ಲಿ ಉಳಿಯುವಂಥದ್ದು.
ಮೂಡಲಪಾಳ್ಯದ ಸ್ವಗ್ರಹದಲ್ಲಿ ಮೃತ ಲಕ್ಷ್ಮಣ್ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದೇ ಅಂತ್ಯಕ್ರಿಯೆ ನಡೆಯಲಿದೆ. ಹಿರಿಯ ನಟ ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದಾರೆ.