-->

   ಮಂಗಳೂರು: ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ- ಬರಿದಾಯ್ತು 'ಚಂದ್ರಗಿರಿ'ಯ ತೀರ

ಮಂಗಳೂರು: ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಇನ್ನಿಲ್ಲ- ಬರಿದಾಯ್ತು 'ಚಂದ್ರಗಿರಿ'ಯ ತೀರ

ಮಂಗಳೂರು: ಕನ್ನಡ ಮುಸ್ಲಿಂ ಸಂವೇದನಾ ಬರಹಗಾರ್ತಿ, ಹಿರಿಯ ಸಾಹಿತಿ ಸಾರಾ ಅಬೂಕ್ಕರ್(86) ಮಂಗಳವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಚಮನಾಡು ಎಂಬ ಗ್ರಾಮದವರಾದ ಅವರು ಮಂಗಳೂರಿನ ಲೇಡಿಹಿಲ್ ಬಳಿಯ ಹ್ಯಾಟ್ ಹಿಲ್ ನಲ್ಲಿ ವಾಸವಾಗಿದ್ದರು. ಸಾರಾ ಅಬೂಬಕ್ಕರ್ ಅವರು ಕಥೆ, ಕಾದಂಬರಿ, ಪ್ರವಾಸ ಸಾಹಿತ್ಯ, ವೈಚಾರಿಕ ಲೇಖನಗಳು, ನಾಟಕ, ಅನುವಾದ ಹೀಗೆ ಹತ್ತು ಹಲವು ರೀತಿ ಸಾಹಿತ್ಯ ಸೇವೆ ಮಾಡಿದವರು.

ಆದರೆ ಸಾರಾ ಅಬೂಬಕ್ಕರ್ ಬರೆದ ಚಂದ್ರಗಿರಿಯ ತೀರದಲ್ಲಿ ಎಂಬ ಪುಟ್ಟ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತು.

ಚಂದ್ರಗಿರಿ ಕಾದಂಬರಿ ತ್ರಿವಳಿ ತಲಾಖ್, ಪುನರ್ಮಿಲನ ವಸ್ತುವಿನ ಬಗ್ಗೆ ಚರ್ಚಿಸಿದರೆ, 'ಸಹನಾ' ಕಾದಂಬರಿ ಬಹುಪತ್ನಿತ್ವ, ವಜ್ರಗಳು ಕಾದಂಬರಿ ಸುಲಭದ ತಲಾಖ್, ಸುಳಿಯಲ್ಲಿ ಸಿಕ್ಕವರು, ಪ್ರವಾಹ, ಸುಳಿ ಕಾದಂಬರಿಗಳಲ್ಲಿ ಹಣಮಾಡುವ ಉದ್ದೇಶದಿಂದ ದುಶ್ಚಟಗಳನ್ನೇ ಬಂಡವಾಳವಾಗಿಸುವ ಕಥಾನಕಗಳನ್ನು ಹೆಣೆದರು.

ಅದೇ ರೀತಿ ಚಪ್ಪಲಿಗಳು,ಪಂಜರ, ಇಳಿಜಾರು, ತೇಲಾಡುವ ಮೋಡಗಳು ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಒಟ್ಟಾರೆ ಮುಸ್ಲಿಂ ಸಂವೇದನಾ ದೃಷ್ಟಿಕೋನದಿಂದ ಮುಸ್ಲಿಂ ಮಹಿಳೆಯರ ತವಕ ತಲ್ಲಣಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಚಿತ್ರಿಸುತ್ತಾ ಹೋಗಿದ್ದಾರೆ. ಸಾಹಿತಿಯಾಗಿ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಇಂದು ರಾತ್ರಿ 8ಗಂಟೆಗೆ ಮಂಗಳೂರಿನ ಬಂದ‌ ನಲ್ಲಿರುವ ಜೀನತ್ ಭಕ್ ಮಸೀದಿ ಆವರಣದಲ್ಲಿ ಅವರ ದಫನ ಕಾರ್ಯ ನಡೆಯಲಿದೆ. ಸಾರಾ ಅಬೂಬಕ್ಕರ್ ಅವರು ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99