-->

 ಮಂಗಳೂರು: ಎಂಆರ್‌ಪಿಎಲ್‌ನಿಂದ ಹಸಿರೀಕರಣಕ್ಕೆ ಒತ್ತು

ಮಂಗಳೂರು: ಎಂಆರ್‌ಪಿಎಲ್‌ನಿಂದ ಹಸಿರೀಕರಣಕ್ಕೆ ಒತ್ತು

ಮಂಗಳೂರು: ಎಂಆರ್‌ಪಿಎಲ್ ರಿಫೈನಲ್ಲಿ 1,600 ಎಕರೆಯಷ್ಟು ಭೂಮಿಯಿದ್ದು, ಅದರಲ್ಲಿ ಶೇ.33ರಷ್ಟು ಹಸಿರು ಬೆಳೆಸಲಾಗಿದೆ. ಎಂಆರ್‌ಪಿಎಲ್ ಹೊರ ಸಮುಚ್ಚಯ ಪೂರ್ತಿ ಹಸಿರೀಕರಣ ಮಾಡಲಾಗಿದೆ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಹೇಳಿದರು.

ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ಶೇ.80ರಷ್ಟು ಟೌನ್‌ಶಿಪ್ ಒಳಗೊಂಡಿದೆ. ಪಿಲಿಕುಳ ಹಾಗೂ ಬೆಂಗರೆ ಸೇರಿ 75 ಎಕರೆ ಹಸಿರೀಕರಣಕ್ಕೆ ಸ್ಥಳೀಯ ಸಂಸ್ಥೆ ಹಾಗೂ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಲಾಗಿದೆ ಎಂದರು.
ಎಂಆರ್‌ಪಿಎಲ್ ಕಾರ್ಯಾಚರಿಸುತ್ತಿರುವ ಕೋಕ್, ಸಲ್ಫರ್ ಘಟಕದಿಂದ ಪರಿಸರ ಮಾಲಿನ್ಯದ ದೂರು ಬಂದಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನೀರು ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ. ಹಲವು ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತಿದೆ. ಅವುಗಳನ್ನು ಚಾಚೂ ತಪ್ಪದೆ

ಅನುಷ್ಠಾನಿಸಲಾಗುತ್ತದೆ. ಈಗಾಗಲೇ ಮಾಲಿನ್ಯ ನಿಯಂತ್ರಣಕ್ಕೆ ಸುಮಾರು 2,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಘಟಕದ 10 ಕಿ.ಮೀ. ವ್ಯಾಪ್ತಿಯಲ್ಲಿ 8 ಹಳ್ಳಿಗಳಿಂದ ನೀರಿನ ಸ್ಯಾಂಪಲ್ ಪಡೆದು ತಪಾಸಣೆ ನಡೆಸಲಾಗಿದೆ. ಪರಿಸರ ಮಾಲಿನ್ಯದಂತಹ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಜೋಕಟ್ಟೆ ಪ್ರದೇಶದ 26 ಎಕರೆಯನ್ನು ಸ್ವಾಧೀನಪಡಿಸಿ ಅಲ್ಲಿರುವವರಿಗೆ ಪರ್ಯಾಯ ವಸತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೆಂಕಟೇಶ್ ಸ್ಪಷ್ಟಪಡಿಸಿದರು.
ಪೆಟ್ರೋ ಕೆಮಿಕಲ್ಸ್ ಆಮದು ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ನಾಲ್ಕನೇ ಹಂತದ ವಿಸ್ತರಣೆ ಯೋಜನೆ ಕುತ್ತೆತ್ತೂರು, ಪೆರ್ಮುದೆ ಪ್ರದೇಶಗಳಲ್ಲಿ ಕಾರ್ಯಗತಗೊಳ್ಳಲಿದೆ. ಸುಮಾರು 850 ಎಕರೆ ಪ್ರದೇಶ ಭೂಸ್ವಾಧೀನಕ್ಕೆ ಮುಂದಾಗಿದ್ದು, ಕೆಲವು ಕಡೆ ಭೂಮಾಲೀಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇತ್ಯರ್ಥಕ್ಕೆ ಬಾಕಿಯಿದೆ. ಇಲ್ಲಿನ ಸಂತ್ರಸ್ತರಿಗೆ 15 ಕಿ.ಮೀ. ದೂರದ ಮೂಳೂರಿನಲ್ಲಿ 120 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಅದು ನೀರು ನಿಲ್ಲುವ ಸ್ಥಳವಾಗಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99