-->

  "ಮೂಡುಬಿದಿರೆಯಲ್ಲಿ ಜನಸ್ಪಂದನ" 429 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಿಂಚಣಿಪತ್ರ ವಿತರಿಸಿದ ಶಾಸಕ ಕೋಟ್ಯಾನ್

"ಮೂಡುಬಿದಿರೆಯಲ್ಲಿ ಜನಸ್ಪಂದನ" 429 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಿಂಚಣಿಪತ್ರ ವಿತರಿಸಿದ ಶಾಸಕ ಕೋಟ್ಯಾನ್

ಮೂಡುಬಿದಿರೆ: ಎಲ್ಲಾ ಸರಕಾರಿ ಸೇವೆಗಳು ಮತ್ತು ಸವಲತ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ನಿಟ್ಟಿನಲ್ಲಿ ಮೂಡುಬಿದಿರೆ ವ್ಯಾಪ್ತಿಯ 8ಗ್ರಾಮಗಳನ್ನೊಳಗೊಂಡ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಶಾಸಕ ಉಮಾನಾಥ.ಎ ಕೋಟ್ಯಾನ್ ನೇತೃತ್ವದಲ್ಲಿ ಬುಧವಾರ ಸ್ಕೌಟ್ಸ್-ಗೈಡ್ಸ್ ಕನ್ನಡಭವನದಲ್ಲಿ ಮೂರನೇ ಆವೃತ್ತಿಯ ಜನಸ್ಪಂದನ ಕಾರ್ಯಕ್ರಮದಲ್ಲಿ 18 ಫಲಾನುಭವಿಗಳಿಗೆ  94 ಸಿ ಹಕ್ಕುಪತ್ರ ಹಾಗೂ 173 ಜನರಿಗೆ 94 ಸಿಸಿ ಹಕ್ಕುಪತ್ರ ಹಾಗೂ 69 ಮಂದಿಗೆ ಪಿಂಚಣಿಪತ್ರವನ್ನು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡ 8 ಕೊರಗ ಸಮುದಾಯದ ಕುಟುಂಬಗಳಿಗೆ  ಸೇರಿ ಒಟ್ಟು 429 ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ವಿತರಿಸಿದರು.
ನಂತರ ಮಾತನಾಡಿದ ಶಾಸಕ ಕೋಟ್ಯಾನ್, ಡೀಮ್ಡ್ ಫಾರೆಸ್ಟ್ನ ಹೆಚ್ಚು ಭಾಗವನ್ನು ತೆರವುಗೊಳಿಸಿ, ಹಲವಾರು ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಸೂರನ್ನು ಕಟ್ಟಿ ಕುಳಿತ ಸುಮಾರು 700 ರಿಂದ 800ಮನೆಗಳಿಗೆ ಈಗಾಗಲೇ ಹಕ್ಕುಪತ್ರಗಳನ್ನು ನೀಡಲಾಗಿದೆ. ಇನ್ನೂ ಸಂಪೂರ್ಣ ಡೀಮ್ಡ್ ಫಾರೆಸ್ಟ್ನಲ್ಲಿ ಮನೆ ಕಟ್ಟಿ ಕುಳಿತವರಿಗೂ ಡೀಮ್ಡ್ ಪಟ್ಟಿಯಿಂದ ತೆರವುಗೊಳಿಸಲು ಪ್ರಯತ್ನಿಸಲಾಗುವುದೆಂದ ಅವರು ಅಂತಹ ಕುಟುಂಬಗಳಿಗೂ ಹಕ್ಕುಪತ್ರವನ್ನು ನೀಡುವ ಕಾರ್ಯವನ್ನು ನೀಡಲಾಗುವುದು ಎಂದರು.
ಅಭಿವೃದ್ಧಿ ಮಾಡುವಾಗ ಯಾವುದೇ ಜಾತಿ, ಧರ್ಮ,ಪಕ್ಷ ನೋಡದೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ರಸ್ತೆ, ಕಾಂಕ್ರೀಟಿಕರಣ, ಜಲಜೀವನ್ ಮಿಷನ್,ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನೀತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದ ಅವರು ಇದುವರೆಗೂ 1900 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಜನರು ತಮ್ಮನ್ನು ಆರಿಸಿದಕ್ಕೆ ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿದ್ದೇನೆ ಎಂದರು.
 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99