
ತಾಲೂಕು ಕಚೇರಿಯಲ್ಲಿ ಮಿತಿ ಮೀರಿದೆ ಭ್ರಷ್ಟಾಚಾರ ಅಭಯಚಂದ್ರ ಆರೋಪ- ತನಿಖೆಗೆ ಆಗ್ರಹ
Wednesday, January 25, 2023
ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹಾಗೂ ತಾಲೂಕು ಕಚೇರಿಯ ಹಳೆಯ ಪಡಸಾಲೆಯಲ್ಲಿ ಕ್ಯಾಂಟೀನ್ ನಡೆಸಲುದ್ದೇಶಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಮಾಜಿ ಸಚಿವ ಕೆ.ಅಭಯಚಂದ್ರ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿಯ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದು ಬಡ ಜನರಿಗೆ ಅನ್ಯಾಯವಾಗುತ್ತಿದೆ, ಲಂಚಕ್ಕಾಗಿ ಜನರನ್ನು ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ತನಿಖೆ ನಡೆಸಿ ಶಿಕ್ಷೆಯಾಗಬೇಕು, ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆಯೂ ತನಿಖೆಯಾಗಬೇಕೆಂದು ಅಭಯಚಂದ್ರ ಅವರು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೆರಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಇಟ್ಬಾಲ್ ಕರೀಮ್, ಕೊರಗಪ್ಪ, ಸುರೇಶ್ ಕೋಟ್ಯಾನ್,ಹಿಮಾಯತ್, ಕಾಂಗ್ರೆಸ್ ಮುಖಂಡರಾದ ರಾಘು ಪೂಜಾರಿ, ಚಂದ್ರಹಾಸ ಸನಿಲ್, ಲತೀಫ್, ಪುರುಷೋತ್ತಮ, ಪ್ರಭಾಕರ್, ಪ್ರವೀಣ್ ಶೆಟ್ಟಿ, ವಾಸುದೇವ ನಾಯಕ್, ಸುಪ್ರಿಯಾ ಡಿ.ಶೆಟ್ಟಿ, ಮುಹಮ್ಮದ್ ಅಸ್ಲಾಮ್ ಮತ್ತಿತರರು ಉಪಸ್ಥಿತರಿದ್ದರು.