ಮಂಗಳೂರು : ಅಪ್ರಾಪ್ತಗೆ ಲೈಂಗಿಕಕಿರುಕುಳ ನೀಡಿದ ಆರೋಪಿಗೆ 20 ವರ್ಷದ
Wednesday, January 25, 2023
ಮಂಗಳೂರು : ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಎಫ್‌ಟಿಎಸ್‌ಸಿ-2 ಪೋಕ್ಸ್) ಕಾಮುಕನಿಗೆ 20 ವರ್ಷದ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ನಿವಾಸಿ ಬಾಬಿ (48) ಶಿಕ್ಷೆಗೊಳಗಾದ ಆರೋಪಿ. ಬಾಬಿ 2021ರ ಡಿ.19 ರಿಂದ 2022ರ ಫೆ.26ರ ಮಧ್ಯೆ ಕಡಿರುದ್ಯಾವರ ಗ್ರಾಮದ ಎರ್ಮಾಳಪಲ್ಕೆ-ಮಠ ಎಂಬಲ್ಲಿನ ಅಪ್ರಾಪ್ತಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಾಲಕಿ 2022ರ ಮಾರ್ಚ್ 3ರಂದು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.