-->

ತೀರ್ಪುಗಾರರು ಮಧ್ಯಪಾನ ಮಾಡಿ ಕಂಬಳದಲ್ಲಿ ಭಾಗವಹಿಸುವಂತಿಲ್ಲ  -ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆಯಲ್ಲಿ ಹಲವು ನಿರ್ಣಯ

ತೀರ್ಪುಗಾರರು ಮಧ್ಯಪಾನ ಮಾಡಿ ಕಂಬಳದಲ್ಲಿ ಭಾಗವಹಿಸುವಂತಿಲ್ಲ -ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆಯಲ್ಲಿ ಹಲವು ನಿರ್ಣಯ

ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿಯ ಆಶ್ರಯದಲ್ಲಿ ಕೋಣಗಳ ಯಜಮಾನರ ತುರ್ತುಸಭೆಯು ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದ ಬಳಿಯಿರುವ ಸೃಷ್ಟಿ ಸಭಾಂಗಣದಲ್ಲಿ ಬುಧವಾರ ಸಾಯಂಕಾಲ ನಡೆಯಿತು.


ಮುಂದೆ ನಡೆಯುವ ಕಂಬಳಗಳಲ್ಲಿ ಎಸ್‌ಡಿಸಿಸಿನವರು ನೀಡಿದಂತಹ ಸೆನ್ಸಾರ್ ಸಿಸ್ಟಂ ಅನ್ನು ಅಳವಡಿಸಲಾಗುವುದು ಅದರ ಪೂರ್ಣ ಜವಾಬ್ದಾರಿಯನ್ನು ಕಂಗಿನ ಮನೆ ವಿಜಯಕುಮಾರ್ ಅವರಿಗೆ ನೀಡುವುದೆಂದು ತೀರ್ಮಾನಿಸಲಾಯಿತು.


 ತಾಂತ್ರಿಕ ದೋಷಗಳಿಂದ ಸೆನ್ಸಾರ್‌ನಲ್ಲಿ ಸೆನ್ಸರ್ ತೊಂದರೆ ಉಂಟಾದಲ್ಲಿ ಮೂರನೇ ತೀರ್ಪುಗಾರರು ತೀರ್ಪು ನೀಡಲು ಅವಕಾಶ ನೀಡಲಾಯಿತು. 
ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ ಸಮಿತಿಯಿಂದ ನಿಯೋಜಿಸಲ್ಪಟ್ಟವರು ಕಾರ್ಯನಿರ್ವಹಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. 


ತೀರ್ಪುಗಾರರು ಮಧ್ಯಪಾನ ಮಾಡಿ ಕಂಬಳದಲ್ಲಿ ಭಾಗವಹಿಸುವಂತಿಲ್ಲ ಯಾವುದೇ ಕಾರಣಕ್ಕೂ ಅಶಿಸ್ತನ್ನು  ತೋರಿದ್ದಲ್ಲಿ ಅಂತಹ ತೀರ್ಪುಗಾರರನ್ನು ಮುಂದಿನ ಕಂಬಳಗಳಿಗೆ ಅಮಾನತುಗೊಳಿಸಲಾಗುವುದೆಂದು ನಿರ್ಧರಿಸಲಾಯಿತು. ತೀರ್ಪುಗಾರರು ಮತ್ತು ಉದ್ಘೋಷಕರು ಕಂಬಳಕ್ಕೆ ಸಂಬಂಧಪಡದ ವಿಷಯಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ಸ್ಪರ್ಧೆಗೆ ಕೋಣಗಳಿಗೆ ಕರೆಕೊಟ್ಟಾಗ ತಕ್ಷಣ ಕರೆಗೆ ಬರತಕ್ಕದ್ದು ಸೂಕ್ತ ಕಾರಣವಿಲ್ಲದೆ ವಿಳಂಬ ಮಾಡಿದ್ದಲ್ಲಿ 
ಸಮಿತಿಯಲ್ಲಿ ನಿಗದಿಪಡಿಸಲಾದ ಕಾಲಮಿತಿ ಆಧಾರದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುವುದು.
ಮೂರನೇ ತೀರ್ಪುಗಾರರ ನೀಡುವ ತೀರ್ಮಾನ ಸಮಯ ಟಿವಿ ನೋಡಲು ಎರಡು ಕೋಣಗಳ ಪ್ರತಿನಿಧಿಗಳಿಗೆ ಅಥವಾ ಯಜಮಾನರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. 


ಕಂಬಳ ಸಮಿತಿಯ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ,  ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ಸುರೇಶ್ ಕೆ ಪೂಜಾರಿ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಪಿ.ಆರ್ .ಶೆಟ್ಟಿ ಓಟದ ಕೋಣಗಳ ಯಜಮಾನರಾದ ಶಕ್ತಿಪ್ರಸಾದ್ ಶೆಟ್ಟಿಮ ನಂದಳಿಕೆ ಶ್ರೀಕಾಂತ್ ಭಟ್,ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಬಜ್ಪೆ ಗಂಧಬೆಟ್ಟು ಅರುಣ್ ಶೆಟ್ಟಿ, ಚಂದ್ರಹಾಸ್ ಸನಿಲ್, ರಂಜಿತ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99