-->
   ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್ ನಝೀರ್ ನಿವೃತ್ತಿ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್ ನಝೀರ್ ನಿವೃತ್ತಿ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ, ಮೂಡುಬಿದಿರೆ ಮೂಲದ ಎಸ್.ಅಬ್ದುಲ್ ನಝೀರ್ ಅವರು ಇಂದು (ಜ.4) ನಿವೃತ್ತಿಯಾಗಿದ್ದಾರೆ.


ಅಯೋಧ್ಯೆ ರಾಮ ಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ವಿವಾದ, ತ್ರಿವಳಿ ತಲಾಖ್‌ ಹಾಗೂ ನೋಟ್ ಬ್ಯಾನ್ ಗೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿದವರಲ್ಲಿ ನಝೀರ್ ಅವರು ಒಬ್ಬರಾಗಿದ್ದರು.


ಮೂಡುಬಿದಿರೆ ಕಾನದವರಾಗಿರುವ ನಝೀರ್ ಅವರು
ಬೆಳುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿಕ ಮಹಾವೀರ ಕಾಲೇಜು ಮತ್ತು ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ಕಾನೂನು ಪದವಿ ಪಡೆದು 1983 ರಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ್ದರು.


2003ರಲ್ಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2017ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ರುವಾಗಲೇ ಸುಪ್ರೀಂ ಕೋರ್ಟ್‌ ಗೆ ಪದೋನ್ನತಿ ಪಡೆದರು. 


ನಝೀರ್ ಅವರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೇ ಉನ್ನತೀಕ ರಿಸಲ್ಪಟ್ಟ ಮೂರನೇ ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದಾರೆ. ಕೆಲವು ಐತಿಹಾಸಿಕ ತೀರ್ಪುಗಳಿಂದ ದೇಶದ ಗಮನ ಸೆಳೆದಿರುವ ನಝೀರ್ ಅವರು ಮೂಡುಬಿದಿರೆಯವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

Ads on article

Advertise in articles 1

advertising articles 2

Advertise under the article