ಮತಾಂತರಗೊಂಡು ಹಿಂದೂ (HINDU) ಯುವಕನ ಮದುವೆಯಾದ ಮುಸ್ಲಿಂ (MUSLIM)ಯುವತಿ
ಉತ್ತರ ಪ್ರದೇಶ: ಮತಾಂತರಗೊಂಡು ಹಿಂದೂ
(HINDU) ಯುವಕನನ್ನು ಮುಸ್ಲಿಂ (MUSLIM)ಯುವತಿ
ಮದುವೆಯಾದ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿದೆ. ಮುಸ್ಲಿಂ ಹುಡುಗಿಯೊಬ್ಬಳು ತನ್ನ ಧರ್ಮವನ್ನು ಬದಲಿಸಿ ಹಿಂದೂ ಧರ್ಮ ಅಳವಡಿಸಿಕೊಂಡು ಹಿಂದೂ ಹುಡುಗನನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾಳೆ.
ಬುದೌನ್ ಜಿಲ್ಲೆಯ ಬಡಾಯುನ್ ಪರೌಲಿ ಗ್ರಾಮದ ನಿವಾಸಿ ಸೋಮೇಶ್ ಶರ್ಮಾ ದೆಹಲಿಯಲ್ಲಿ ಖಾಸಗಿ
ಸಂಸ್ಥೆಯಲ್ಲಿ ಕೆಲಸದಲ್ಲಿದ್ದಾರೆ. ಸೋಮೇಶ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಅದೇ ಗ್ರಾಮದ ನಿವಾಸಿ, ಮುಸ್ಲಿಂ ಯುವತಿಯಾದ ಇಲ್ಮಾಳನ್ನು ಪ್ರೀತಿಸುತ್ತಿದ್ದನು. ಇವರ 4-5 ವರ್ಷದ ಪ್ರೀತಿಗೆ ಧರ್ಮವೊಂದೇ ಅಡ್ಡಿಯಾಗಿತ್ತು. ಮನೆಯವರು ಕೂಡ ಇವರಿಬ್ಬರ ಮದುವೆಗೆ ಒಪ್ಪಿಗೆ
ನೀಡಿರಲಿಲ್ಲ.
ಆ ಕಾರಣಕ್ಕಾಗಿ ಇಬ್ಬರು ಮನೆ ತೊರೆದು ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
ತನ್ನ ಪ್ರೀತಿಗಾಗಿ ಧರ್ಮವನ್ನು ಲೆಕ್ಕಿಸದ ಇಲ್ಮಾ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದೀಗ ಅವರ ಹೆಸರು ಸೌಮ್ಯ ಶರ್ಮಾ ಎಂದಾಗಿದೆ. ಗುರುವಾರ ಸಂಜೆ ಬರೇಲಿಯ ಅಗಸ್ತ್ಯ ಮುನಿ ಆಶ್ರಮದ ಪಂಡಿತರ ಸಮ್ಮುಖದಲ್ಲಿ ಹಿಂದೂ ಪದ್ಧತಿಯಂತೆ ಇಲ್ಮಾ ಅವರು ಸೋಮೇಶ್ ಅವರನ್ನು ವರಿಸಿದ್ದಾರೆ. ಪಂಡಿತರಿಗೆ ಸ್ವಂತ ಇಚ್ಛೆಯಿಂದ ನಾವಿಬ್ಬರು ವಿವಾಹವಾಗುತ್ತಿರುವುದಾಗಿ ಹೇಳಿ, ದಾಖಲೆಗಳನ್ನು ತೋರಿಸಿ ಮದುವೆಯಾಗಿದ್ದಾರೆ.