ಕಾರ್ಕಳ : ವ್ಯಕ್ತಿಯನ್ನು ಏಮಾರಿಸಿ ಚಿನ್ನ, ನಗದು ಮತ್ತು ಮೊಬೈಲ್ ದರೋಡೆ
Saturday, January 7, 2023
ಕಾರ್ಕಳ : ಮದ್ಯಪಾನದ ನಶೆಯಲ್ಲಿದ್ದ ವ್ಯಕ್ತಿಯನ್ನು ಏಮಾರಿಸಿ ಆತನ ಬಳಿಯಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ನಗದು ಹಾಗೂ ಮೊಬೈಲನ್ನು ಎಗರಿಸಿದ ಘಟನೆ ಕಾರ್ಕಳದಲ್ಲಿ ಜ.4ರಂದು (ಬುಧವಾರ) ನಡೆದಿದೆ.
ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಕಡಂಬಾಕ್ಯಾರು ನಿವಾಸಿ ಸುಧಾಕರ ಶೆಟ್ಟಿ ಎಂಬುವರು ಜನವರಿ, 4ರಂದು ಬೆಂಗಳೂರಿನಿಸಿದ ಪೂಜಾ ಕಾರ್ಯಕ್ರಮಕ್ಕಾಗಿ ರೆಂಜಾಳಕ್ಕೆ ಬಂದವರು ಜನವರಿ 5 ರಂದು ರಾತ್ರಿ ಬೆಂಗಳೂರಿಗೆ ಹೋಗಲು ಮನೆಯಿಂದ ವಿಶಾಲ್ ಬಸ್ ಕಚೇರಿಗೆ ಬಂದಿದ್ದರು.
ಅಲ್ಲಿ ಬೆಂಗಳೂರಿನ ಬಸ್ ಹೊರಡಲು ಸಮಯವಿರುವುದರಿಂದ ಪಕ್ಕದಲ್ಲಿರುವ ಕಿಂಗ್ಸ್ ಬಾರಿಗೆ ಹೋಗಿ ಮದ್ಯಪಾನ ಮಾಡಿ ಬಸ್ಸು ಕಚೇರಿಗೆ ಹೋಗುವ ಬದಲು ಕಾರ್ಕಳ ಬಸ್ಟ್ಯಾಂಡ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ಮಾತನಾಡಿಸಿ, ಯಾರಾದರೂ ನೋಡಿದರೆ ನಿಮ್ಮ ಚಿನ್ನ ಹಾಗೂ ಹಣವನ್ನು ಎಗರಿಸುತ್ತಾರೆ. ಆದುದರಿಂದ ಅದನ್ನು ಚೀಲದಲ್ಲಿ ಇರಿಸಿಕೊಳ್ಳಿ ಮತ್ತು ತಾವು ಒಬ್ಬರೇ ಹೋಗುವುದು ಬೇಡ ನಾವು ನಿಮ್ಮನ್ನು ಬಸ್ ಸ್ಟ್ಯಾಂ ಬಿಡುತ್ತೇವೆ ಎಂದು ಸುಧಾಕರ ಶೆಟ್ಟಿ ಅವರನ್ನು ಕರೆದೊಯ್ದಿದ್ದರು.
ಸಲ್ಪ ಸಮಯದ ಬಳಿಕ ಸುಧಾಕರ್ ಶೆಟ್ಟಿ ಅವರಿಗೆ ಮದ್ಯದ ನಶೆ ಇಳಿದಾಗ ತನ್ನ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮೆಂತೆ ಸರ, ಒಂದು ನವರತ್ನ ಉಂಗುರ ಸೇರಿದಂತೆ2 ಉಂಗುರ, ಮೊಬೈಲ್ ಹಾಗೂ ತನ್ನ ಬಳಿ ಇದ್ದ 1,500 ನಗದನ್ನು ಕಳ್ಳರು ಎಗರಿಸಿರುವುದು ಅರಿವಿಗೆ ಬಂದಿದೆ. ಕಳ್ಳರು ಸುಮಾರು 1.52,500 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಕಳವುಗೈದಿದ್ದಾರೆ ಎಂದು ಸುಧಾಕ ಶೆಟ್ಟಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ..