-->
UDUPI : ಸಾವಿನಲ್ಲೂ ಜೊತೆಯಾದ ಪತಿ ಪತ್ನಿ

UDUPI : ಸಾವಿನಲ್ಲೂ ಜೊತೆಯಾದ ಪತಿ ಪತ್ನಿ

ಜೊತೆಯಾಗಿ ಸಪ್ತಪತಿ ತುಳಿದವರು ಕೆಲವೊಮ್ಮೆ ವೈಮನಸಿನಿಂದ ಬೇರೆಯಾಗುದನ್ನು ನೋಡಿದ್ದೇವೆ. ಆದರೆ ಸಂಸಾರದ ನೊಗ ಹೊತ್ತವರು ಸಾವಿನಲ್ಲೂ ಒಂದಾಗಿ, ಒಂದೇ ಚಿತೆಯೇರಿರುವುದು ಕಾಣ ಸಿಗುವುದು ಅಪರೂಪ. ಆದ್ರೆ ಉಡುಪಿ ಬೈಂದೂರಿನಲ್ಲಿ ವೃದ್ದ ದಂಪತಿಗಳು ಸಾವಿನಲ್ಲೂ ಜೊತೆಯಾಗಿ, ಚಿತೆ ಏರಿದ್ದಾರೆ.  
ಉಪ್ಪುಂದ ಗ್ರಾಮದ ಸಣ್ಣ ಬೆಸ್ಕೂರು ಮನೆ ನಿವಾಸಿ ಮುಡೂರ ದೇವಾಡಿಗರಿಗೆ 85 ವರ್ಷ ಪ್ರಾಯ. 1937ರಲ್ಲಿ ಜನಿಸಿದ್ದ ಅವರು, ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ಅವರ ಪತ್ನಿ ಮನೆಯಾದ ಬಿಜೂರಿನಲ್ಲಿ ಅವರು ಸಾವನ್ನಪ್ಪಿದ್ದರು. ಸಾವಿನ ಸುದ್ಧಿ ಕುಟುಂಬಿಕರಿಗೆ, ಊರವರಿಗೆ ಮುಟ್ಟಿ ಜನ ಸೇರಿದರು. ಮನೆಯೊಳಗೆ ಮುಡೂರ ದೇವಾಡಿಗರ ಮೃತದೇಹವನ್ನಿಡಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಲಾಗುತ್ತಿತ್ತು. ಇದ್ದಕ್ಕಿದ್ದಂತೆ ಅವರ ಪತ್ನಿ 77 ವರ್ಷ ಪ್ರಾಯದ ಕೃಷ್ಣಿ ದೇವಾಡಿಗ ಪತಿಯ ಪಾರ್ಥಿವ ಶರೀರದ ಎದುರೇ ಕುಳಿತಿದ್ದಲ್ಲಿಯೇ ಕುಸಿದು ಬಿದ್ದರು. ನೆರೆದವರು ಏನಾಯ್ತು ಎಂಬದನ್ನು  ಅರ್ಥಮಾಡಿಕೊಳ್ಳುವಷ್ಟರಲ್ಲಿ ಕೃಷ್ಣಿ ದೇವಾಡಿಗ ಪತಿ ಮುಡೂರ ದೇವಾಡಿಗರ ಹಾದಿ ತುಳಿದಾಗಿತ್ತು!. ಸಂಸಾರದ ನೊಗವನ್ನು ಜೊತೆಯಾಗಿಯೇ ಹೊತ್ತವರು ಸಾವಿನಲ್ಲಿಯೂ ಜೊತೆಯಾಗಿ ಪ್ರಯಾಣಿಸಿದ್ದರು. 5 ಜನ ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಇವರ ಸಾವು ಅಮರ ಪ್ರೇಮದ ಕಥೆ ಸಾರುವಂತಿತ್ತು. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99