
UDUPI : ನೂರಾರು ಕೋಟಿ ವಂಚಿಸಿದ ಸಹಕಾರಿ ಸಂಘ : ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಸಿಬ್ಬಂದಿ..! ( vid
ಉಡುಪಿಯಲ್ಲಿ ಸೊಸೈಟಿಯೊಂದರ ನೂರಾರು ಕೋಟಿ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ, ನೂರಾರು ಠೇವಣಿದಾರರಿಗೆ ದೋಖಾ ಮಾಡಿದ್ದು, ಹಣ ಕಳೆದುಕೊಂಡ ಠೇವಣಿದಾರರು, ಮೋಸ ಹೋಗಿ ಕಣ್ಣೀರು ಹಾಕುತ್ತಿದ್ದಾರೆ.
ಈ ಸಹಕಾರಿ ಸಂಘ, 12 ಶೇ.ಬಡ್ಡಿಯ ಆಮಿಷ ತೋರಿಸಿತು. ಇದನ್ನೇ ನಂಬಿದ ಬಹುತೇಕರು, ಅದರಲ್ಲೂ ಹಿರಿಯ ನಾಗರೀಕರು ತಮ್ಮ ಉಳಿತಾಯದ ಹಣವನ್ನು ಹೆಚ್ಚಿನ ಬಡ್ಡಿಯ ಆಸೆಯಿಂದ ಇಲ್ಲಿ ಠೇವಣಿ ಇರಿಸಿದ್ದರು. ಆದರೆ ಕಳೆದ ಒಂದೆರಡು ತಿಂಗಳಿನಿಂದ ಠೇವಣಿದಾರರಿಗೆ ವಂಚನೆಯ ವಾಸನೆ ಬಡಿದಿದೆ.
ಆದರೆ ಕಳೆದ ಕೆಲವು ದಿನಗಳಿಂದ ಸೊಸೈಟಿ ಬಾಗಿಲು ಬಂದ್ ಆಗಿದೆ. "ಇಂದು ರಜೆ" ಎಂಬ ಬೋರ್ಡ್ ನೇತಾಕಿ ಎಂಡಿ ಪರಾರಿಯಾಗಿದ್ದಾನೆ ಎಂಬುದು ಠೇವಣಿದಾರರ ಆರೋಪ.ಹಣ ಕಳೆದುಕೊಂಡವರು ಸೊಸೈಟಿ ಎದುರು ನಿಂತು ಕಣ್ಣೀರು ಹಾಕುತ್ತಿದ್ದಾರೆ. ಈ ಮಧ್ಯೆ ಠೇವಣಿದಾರರು ಜಮಾಯಿಸಿದಾಗ ಇಲ್ಲಿಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆಯಿತು .