-->
ಮಂಗಳಮುಖಿಯರ (transgender)  ಗುರುತಿನಚೀಟಿ ದುರುಪಯೋಗ: ಕ್ರಮದ ಎಚ್ಚರಿಕೆ*

ಮಂಗಳಮುಖಿಯರ (transgender) ಗುರುತಿನಚೀಟಿ ದುರುಪಯೋಗ: ಕ್ರಮದ ಎಚ್ಚರಿಕೆ*

 



ಮಂಗಳೂರು:- ಜಿಲ್ಲೆಯ ಟ್ರಾನ್ಸ್ಜೆಂಡರ್ಸ್(ಲಿಂಗತ್ವ ಅಲ್ಪಸಂಖ್ಯಾತರು) ಅವರಿಗೆ ಜಿಲ್ಲಾಧಿಕಾರಿವರಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಸಮುದಾಯದ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ದುರುಪಯೋಗ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.


     ಸಮಾಜದ ಹಿತದೃಷ್ಟಿಯಿಂದ ಗುರುತಿನ ಚೀಟಿಯನ್ನು ದುರುಪಯೋಗ ಮಾಡದಂತೆ ಹಾಗೂ ಮುಂದಿನ ದಿನಗಳಲ್ಲಿ ದುರುಪಯೋಗ ಮಾಡುವುದು ಕಂಡು ಬಂದಲ್ಲಿ ಗುರುತು ಚೀಟಿಯನ್ನು ರದ್ದುಪಡಿಸಲಾಗುವುದು.


ಮಂಗಳೂರು ತಾಲೂಕಿನ ಸುತ್ತಮುತ್ತಲು ಮತ್ತು ವಿಶೇಷವಾಗಿ ಮಂಗಳೂರು (ನಗರ) ವ್ಯಾಪ್ತಿಯ ಪ್ರದೇಶಗಳಲ್ಲಿ ಮಹಿಳೆಯರು ಲಿಂಗತ್ವ ಅಲ್ಪಸಂಖ್ಯಾತರಂತೆ ವರ್ತಿಸಿ ಜನರಿಂದ ಹಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಲೂಟಿ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಕೃತ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಿದರೆ ಅಂತಹಾ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article