UDUPI : ಅಜ್ಜಿ ರೇಪ್ ಕೇಸ್ ; ಆರೋಪಿಗೆ 10 ವರ್ಷ ಜೈಲು, 50ಸಾವಿರ ದಂಡ
Thursday, December 1, 2022
78 ವರ್ಷದ ಅಜ್ಜಿಯನ್ನು ಅತ್ಯಾಚಾರ ಮಾಡಿ, ಆಕೆಯ ಬಳಿ ಇದ್ದ ಹಣ ದೋಚಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಶಿವಮೊಗ್ಗದ ಇರ್ಫಾನ್ ಆರೋಪಿ.
ಜೂನ್ 5, 2017ರಲ್ಲಿ ಎರಡು ತಿಂಗಳ ಕಾಲ ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಫಾನ್ಸ್ ಇಲ್ಲಿನ ತೆಂಕಪೇಟೆಯ ನಿರ್ಜನ ಪ್ರದೇಶದಲ್ಲಿ ಅಜ್ಜಿಯ ಮೇಲೆ ಅತ್ಯಾಚಾರ ನಡೆಸಿ 30,000 ಕಸಿದು ಪರಾರಿಯಾಗಿದ್ದ. ದರೋಡೆ ಪ್ರಕರಣದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿದ ನ್ಯಾಯಾಲಯವು, ದಂಡದ ಮೊತ್ತವನ್ನು ಸಂತ್ರಸ್ತ ವೃದ್ಧೆಗೆ ನೀಡಲು ಆದೇಶಿಸಿದೆ. ಆರೋಪಿ ಇರ್ಫಾನ್ ಸದ್ಯ ಕೊಲೆ ಆರೋಪವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.