ರಸ್ತೆ ಅಪಘಾತ ; ಬೈಕ್ ಸಹಸವಾರ ಸಾವು
Friday, December 2, 2022
ಲಾರಿ ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ನಲ್ಲಿ ಶುಕ್ರವಾರ ನಡೆದಿದೆ.
ಉದ್ಯಾವರ ಬೊಳ್ಜೆಯ ಸುಶಿಕ್ಷಿತ್ (20) ಮೃತ ಸಹಸವಾರ.
ಅಫಘಾತದಿಂದ ಗಾಯಗೊಂಡ ಬೈಕ್ ಸವಾರ ಜಯದೀಪ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಶಿಕ್ಷಿತ್ ತನ್ನ ಗೆಳೆಯ ಜಯದೀಪ್ ಜೊತೆಗೆ ಕೆಟರೀಂಗ್ ಕೆಲಸಕ್ಕಾಗಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುಶಿಕ್ಷಿತ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ