ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಣ್ಣು ದಿನಾಚರಣೆ
ಮಂಗಳವಾರ: ನಗರದ ವಿಶ್ವವಿದ್ಯಾಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಗಳ ಸಹಯೋಗದೊಂದಿಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಆಯೋಜಿಸಲಾಗಿತ್ತು.
ಕರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ವಿವಿ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಡಾ.ಕುಮಾರಸ್ವಾಮಿ ಎಂ ಅವರು ಮಾತನಾಡಿ, ನಮ್ಮ ಮಣ್ಣನ್ನು ಉಳಿಸುವ ದೊಡ್ಡದೊಂದು ಕರ‍್ಯ ಆಗಬೇಕಿದೆ. ನಮ್ಮ ಮನೆಗಳಲ್ಲಿ ತಾರಸಿ ಕಾಡನ್ನು ಬೆಳೆಸುವುದು ಈಗಿನ ಅಗತ್ಯ ಮತ್ತು ಅನಿವರ‍್ಯತೆ, ಎಂದು ಅಭಿಪ್ರಾಯಪಟ್ಟರು. ಪ್ರಭಾರ ಪ್ರಾಂಶುಪಾಲ ಡಾ. ಹರೀಶ ಎ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಣ್ಣು ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ರ‍್ಧೆಗಳಲ್ಲಿ ವಿಜೇತರಾದ ವಿದ್ಯರ‍್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದರಾಜು ಸ್ವಾಗತಿಸಿದರು. ದ್ವಿತೀಯ ಬಿಎಸ್ಸಿಯ ಸ್ವಾತಿ ವಂದಿಸಿದರು. ದ್ವಿತೀಯ ಬಿಎಸ್ಸಿಯ ಮೇಘನ ಕರ‍್ಯಕ್ರಮ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕು.ಕಾವ್ಯ ಮೊದಲಾದವರು ಉಪಸ್ಥಿತರಿದ್ದರು.