ಪಠಾಣ್ ಚಿತ್ರದ BESHARAM RANG ಬಿಡುಗಡೆಗೆ ಸಜ್ಜು… ದೀಪಿಕಾ ಪಡುಕೋಣೆ HOT LOOK !
ಹೈದರಾಬಾದ್: 'ಪಠಾಣ್' ಚಿತ್ರದ ಮೊದಲ ಹಾಡಾದ 'ಬೆಶರಾಂ ರಾಂಗ್' ಬಿಡುಗಡೆಗೆ ಸಜ್ಜಾಗಿದೆ. ಬೆಶೆರಾಂ ರಾಂಗ್ ಕುರಿತು ಪೋಸ್ಟರ್ ಅನ್ನು ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಗ್ಲಾಮರಸ್ ಅವತಾರದಲ್ಲಿರುವ ಈ ಚಿತ್ರ 2023 ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.
ಸಾಮಾನ್ಯವಾಗಿ
ಟ್ರೈಲರ್ ಬಿಡುಗಡೆಗೊಂಡ ಬಳಿಕ ಚಿತ್ರದ ಹಾಡುಗಳು ಬಿಡುಗಡೆ ಮಾಡಲಾಗುತ್ತದೆ. ಆದರೆ, ಇಲ್ಲಿ
ಈ ನಿಯಮವನ್ನು ಬದಲಾಯಿಸಿ ಸಿನಿಮಾತಂಡ ಸಿನಿಮಾದ ಮೊದಲ
ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರದ ಟ್ರೈಲರ್ ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಪ್ರೇಕ್ಷಕರು ಸಿನಿಮಾದ ಎರಡು ಹಾಡುಗಳನ್ನು ಕೇಳಬಹುದಾಗಿದೆ. ಚಿತ್ರದ ಹಾಡು ಇದೇ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ.
ಚಿತ್ರದ
ಸಂಗೀತದ ಬಗ್ಗೆ ಸಿನಿಮಾಸಕ್ತರಿಗೆ ಇರುವ ಅಭಿಮಾನ ತಿಳಿಯಲು ಮೊದಲಿಗೆ ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿದೆ . ಈ ಯೋಜನೆ ಅನುಸಾರವಾಗಿ
ನಟ ಶಾರುಖ್ ಖಾನ್ ಕೂಡ
ಹಾಡಿನ ಬಿಡುಗಡೆ ದಿನಾಂಕದ ಕುರಿತು ತಮ್ಮ instagramನಲ್ಲಿಅಪ್ಡೇಟ್ ಮಾಡುತ್ತಿದ್ದರು. ದೀಪಿಕಾ ಹಾಟ್ ಲುಕ್ (HOTLOOK)
ನೊಂದಿದೆ ಬೇಶರಂ
ಸಾಂಗ್ ಫೋಟೋವನ್ನು ಶಾರುಖ್ ಹಂಚಿಕೊಂಡಿದ್ದಾರೆ. ಈ ಹಾಡನ್ನು ವಿಶಾಲ್
ದದ್ಲನಿ ಮತ್ತು ಶೇಖರ್ ರವ್ಜಿನಿ ಸಂಯೋಜಿಸಿದ್ದಾರೆ. ರಾಕೇಶ್ ಕುಮಾರ್ ಪಾಲ್ ಸಾಹಿತ್ಯವನ್ನು ಬರೆದಿದ್ದಾರೆ.
ನಾಲ್ಕು
ವರ್ಷ ಗಳ ವಿರಾಮದ
ಬಳಿಕ ಶಾರುಖ್
ಖಾನ್ ಪಠಾಣ್ ಚಿತ್ರದ ಮೂಲಕ ತೆರೆಗೆ
ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ 57 ವರ್ಷ
ದ ನಟ ಆ್ಯಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.