ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಹತ್ಯೆ- ಪ್ರಮುಖ ಆರೋಪಿ ಯುವತಿ ಪೊಲೀಸ್ ಬಲೆಗೆ!
Friday, December 30, 2022
ಬೆಂಗಳೂರು: ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲು ಎತ್ತಿಹಾಕಿ ಕ್ರೂರವಾಗಿ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿತೆ ಕೆ.ಪಿ ಅಗ್ರಹಾರ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಆರೋಪಿತೆ ಸರೋಜ ಮತ್ತು ಕುಟುಂಬಸ್ಥರು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿಸೆಂಬರ್ 4 ರಂದು
ಮಂಜುನಾಥ್ ಎಂಬಾತನನ್ನ ಆರೋಪಿಗಳು ಕೊಲೆ ಮಾಡಿದ್ದರು. ಆಗ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆಗ ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಎಂಬವರನ್ನು ಬಂಧಿಸಿದ್ದರು.
ಆದರೆ ಪ್ರಮುಖ ಆರೋಪಿ ಸರೋಜ ತಲೆರೆಸಿಕೊಂಡಿದ್ದಳು. ಆಕೆಯೇ ಹತ್ಯೆ ಮಾಡಿದ್ದು ಎನ್ನಲು ಹತ್ಯೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿಗಳು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಮಾತನಾಡೋ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದರು.ಕೆ.ಪಿ ಅಗ್ರಹಾರ ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.