-->

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯನ್ನು ಹಿಮದಲ್ಲಿ ಹೂತಿದ್ದ ಯುವಕ- 7 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದದ್ದೆ ರೋಚಕ!

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯನ್ನು ಹಿಮದಲ್ಲಿ ಹೂತಿದ್ದ ಯುವಕ- 7 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದದ್ದೆ ರೋಚಕ!


ಗಾಜಿಯಾಬಾದ್:  ಶ್ರದ್ಧಾ ವಾಕರ್ ಳನ್ನು  ಅಫ್ತಾಬ್  ಪೂನಾವಾಲಾ 35 ತುಂಡು ಮಾಡಿ ಕೊಂದ ಪ್ರಕರಣದಂತೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ  ಅಂಥದ್ದೇ ಘಟನೆಯೊಂದು ನಡೆದಿದೆ.

ಲಿವ್ ಇನ್ ರಿಲೇಶನ್ ಶಿಪ್   (ಸಹಜೀವನ ) ನಡೆಸುತ್ತಿದ್ದ ಯುವತಿಯನ್ನು, ಯುವಕ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದ ಕುಲುವಿನಲ್ಲಿ ಎಸೆದು ಬಂದಿದ್ದಾನೆ.

ಗಾಜಿಯಾಬಾದ್  ಮೂಲದ ಹತ್ಯೆಯಾದ ಯುವತಿ ಕುಟುಂಬದೊಂದಿಗೆ ದೂರವಾಗಿ ಆರೋಪಿ ರಾಮನ್  ಎಂಬಾತನ ಜೊತೆಗೆ ಲಿವ್ ಇನ್  ರಿಲೇಷನ್ ಶಿಪ್  ನಲ್ಲಿದ್ದರು. ವಿವಾಹ ವಿಷಯಕ್ಕಾಗಿ ಇಬ್ಬರ ಮಧ್ಯೆ ನಡೆದ ಜಗಳದಲ್ಲಿ ಯುವಕ, ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಹಿಮಾಚಲಪ್ರದೇಶದಲ್ಲಿ ಬಿಸಾಡಿದ್ದ.

 ಗಾಜಿಯಾಬಾದ್ ನ ವಸುಂದರಾ ಪ್ರದೇಶದ ನಿವಾಸಿಯಾದ ಯುವತಿ, ತನ್ನ ಕುಟುಂಬವನ್ನು ತ್ಯಜಿಸಿ ಏಕಾಂಗಿಯಾಗಿ ಜೀವಿಸುತ್ತಿದ್ದಳು. ಗಾಜಿಯಾಬಾದ್ ನ  ಸಿರೌಲಿಯ ಯುವಕ ರಾಮನ್  ಆಕೆಯ ಜೊತೆಗೆ ಪ್ರೇಮಸಂಬಂಧ ಹೊಂದಿದ್ದ. ಬಳಿಕ ಇಬ್ಬರು ಲಿವ್ ಇನ್ ರಿಲೇಶನ್  ನಡೆಸುತ್ತಿದ್ದರು.

ಕೆಲ ವರ್ಷಗಳ ಬಳಿಕ ಯುವತಿ ವಿವಾಹವಾಗಲು ರಾಮನ್ ನನ್ನು ಕೇಳಿದ್ದಾಳೆ. ಇದಕ್ಕೆ ಆತ ಒಪ್ಪಿರಲಿಲ್ಲ. ಇದು ಇಬ್ಬರ ಮಧ್ಯೆ ವೈಮನಸ್ಯಕ್ಕೆ  ಕಾರಣವಾಗಿತ್ತು. ಬಳಿಕ ಯುವತಿ ಒತ್ತಡ ಹೇರಿದ್ದರಿಂದ ರಾಮನ್  ಆಕೆಯನ್ನು ಹಿಮಾಚಲಪ್ರದೇಶಕ್ಕೆ ಟೂರ್  ಕರೆದೊಯ್ದಿದ್ದಾನೆ. ಕುಲುವಿನಲ್ಲಿದ್ದಾಗ ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಹಿಮದಲ್ಲಿ ಶವವನ್ನು ಬಿಸಾಡಿದ್ದಾನೆ.ನಿರ್ಜನ ಪ್ರದೇಶದಲ್ಲಿ ಏಳು ತಿಂಗಳ ಹಿಂದೆ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಯುವತಿಯನ್ನು ಹತ್ಯೆ ಮಾಡಿ ರಾಮನ್  ಬಳಿಕ ಅದೇ ಮನೆಯಲ್ಲಿ ನಿರಾಳವಾಗಿ ವಾಸ ಮಾಡುತ್ತಿದ್ದ, ಇದು ಯಾರಿಗೂ ಅನುಮಾನ ಬಂದಿರಲಿಲ್ಲ.

 ಈ ಕಡೆ ಯುವತಿಯ ಅಮ್ಮ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಮಿಸ್ಸಿಂಗ್ ಕೇಸ್  ದಾಖಲಿಸಿದ್ದರು. ಏಳು ತಿಂಗಳಿಂದ ತನ್ನ ಮಗಳು ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ತನಿಖೆ ನಡೆಸಿದಾಗ ಆಕೆ ರಾಮನ್  ಜೊತೆ ಲಿವ್ ಇನ್ ರಿಲೇಶನ್ ನಡೆಸುತ್ತಿದ್ದುದು ಗೊತ್ತಾಗಿದೆ. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ  ಹತ್ಯೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99