-->
ಕಾಸರಗೋಡಿನಲ್ಲಿ 19 ವರ್ಷದ ಯುವತಿಯ ಗ್ಯಾಂಗ್ ರೇಪ್

ಕಾಸರಗೋಡಿನಲ್ಲಿ 19 ವರ್ಷದ ಯುವತಿಯ ಗ್ಯಾಂಗ್ ರೇಪ್

  ಕಾಸರಗೋಡು; ಕಾಸರಗೋಡು ನಗರದ   ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ 19 ವರ್ಷದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ಘಟನೆ ನಡೆದಿದೆ.


ಆಕೆಗೆ  ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರಗೈಯ್ಯಲಾಗಿದ್ದು,  ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

 ಮಧೂರು ಪಟ್ಲನಿವಾಸಿ ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿ ನಿವಾಸಿ ಮೋಕ್ಷಿತ್ ಶೆಟ್ಟಿ (43), ಉಳಿಯತ್ತಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (27)  ಬಂಧಿತರು. 

ಕಾಸರಗೋಡು ವಿದ್ಯಾನಗರ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಚಂದ್ರಿಕಾ ನೇತೃತ್ವದ  ಪೊಲೀಸರ ತಂಡ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣ ಸಂಬಂಧಿಸಿದಂತೆ ಕಾಞಂಗಾಡ್ ನಿವಾಸಿ ಜಾಸ್ಮಿನ್ ಎಂಬ ಮಹಿಳೆಯನ್ನು ಕಸ್ಟಡಿಗೆ ಪಡೆಯಲಾಗಿದೆ. 


ಯುವತಿಯ ಹೇಳಿಕೆ ಆಧರಿಸಿ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಯುವತಿ ದೌರ್ಜನ್ಯಕ್ಕೊಳಗಾಗಿದ್ದು, ಯುವತಿಯ ಸ್ನೇಹಿತನೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 

ಯುವತಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಆಕೆಯೊಂದಿಗೆ ಸ್ನೇಹದಲ್ಲಿದ್ದು ಹತ್ತನೇ ತರಗತಿಯ ಬಳಿಕ ಆತನನ್ನು ದೂರ ಮಾಡಿದ್ದಳು. ಇದರಿಂದ ಆಕೆಯ ಸಂಬಂಧಿಕೆಯಾದ ಮಹಿಳೆಯೊಬ್ಬಳ ಸಹಾಯದೊಂದಿಗೆ ಯುವತಿಯನ್ನು ಮತ್ತೆ  ಕರೆಸಿಕೊಂಡ ಯುವಕ ಆಕೆಯನ್ನು ಪುಸಲಾಯಿಸಿ ವಿವಿಧೆಡೆ ಕರೆದೊಯ್ದು ಮಾದಕವಸ್ತು ನೀಡಿ ಅತ್ಯಾಚಾರ ನಡೆಸಿದ್ದಾನೆ.

  ಚೆರ್ಕಳ, ಕಾಸರಗೋಡು, ಮಂಗಳೂರು, ತ್ರಿಶೂರು ಮೊದಲಾದೆಡೆಗಳ ವಸತಿ ಗೃಹಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿರುವುದಾಗಿ ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article