ಮಂಗಳೂರಿನಲ್ಲಿ ವರ್ಷದ ಕೊನೆಯ ದಿನದಲ್ಲಿ ದುರಂತ- ಸಮುದ್ರದಲ್ಲಿ ಮುಳುಗಿದ 18 ವರ್ಷದ ಯುವಕ
Saturday, December 31, 2022
ಮಂಗಳೂರು: 2022 ರ ಕೊನೆಯ ದಿನದಲ್ಲಿ ಮಂಗಳೂರಿನಲ್ಲಿ ದುರಂತ ಸಂಭವಿಸಿದ್ದು 18 ವರ್ಷದ ಯುವಕ ಸಮುದ್ರದಲ್ಲಿ ಮುಳುಗಿದ್ದಾನೆ.
ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸತ್ಯಂ (18 ) ಸಮುದ್ರದಲ್ಲಿ ಮುಳುಗಿದ ಯುವಕ. ಈತ ಸುರತ್ಕಲ್ ಎನ್ ಐ ಟಿ ಕೆ ಬೀಚಿಗೆ ಇಂದು ಮಧ್ಯಾಹ್ನ ಗೆಳೆಯ ಪ್ರಭಾಕರ್ ನೊಂದಿಗೆ ಬಂದಿದ್ದ. ಇವರಿಬ್ಬರು ಸಮುದ್ರದಲ್ಲಿ ಈಜಿ ನೀರಿನ ಸೆಳೆತಕ್ಕೆ ಸಿಲುಕಿದ್ದರು.
ಪ್ರಭಾಕರ್ ಈಜಿ ದಡ ಸೇರಿದ್ದು, ಸತ್ಯಂ ಸಮುದ್ರದಲ್ಲಿ ಕಣ್ಮರೆಯಾಗಿದ್ದಾನೆ. ಈತನ ಪತ್ತೆಗೆ ಸ್ಥಳೀಯ ಮೀನುಗಾರರು ಪ್ರಯತ್ನಿಸುತ್ತಿದ್ದಾರೆ.