UDUPI : ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು ; ಆತ್ಮಹತ್ಯೆಗೆ ಕಾರಣವಾಯ್ತಾ ಪ್ರಿನ್ಸಿಪಾಲ್ ಬೈಗುಳ..?
Tuesday, November 29, 2022
ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂದದಕ್ಕೆ, ಪ್ರಿನ್ಸಿಪಾಲ್ ಬೈದರು ಎಂದು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರು ಎಂಬಲ್ಲಿ ನಡೆದಿದೆ.
ದೀಪ್ತಿ ನೇಣಿಗೆ ಶರಣಾದ ವಿದ್ಯಾರ್ಥಿನಿ. ಹೆಬ್ರಿಯಲ್ಲಿರುವ ಎಸ್ ಆರ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದೀಪ್ತಿ. 10 ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಉಚಿತ ಸೀಟ್ ಪಡೆದಿದ್ದಳು. ಈ ಬಾರಿಯ ಪರೀಕ್ಷೆಯಲ್ಲಿ10 ಅಂಕ ಕಡಿಮೆ ಗಳಿಸಿದ್ದಕ್ಕೆ, ಕಮ್ಮಿ ಮಾರ್ಕ್ಸ್ ಗೆ ಫೈನ್ ಹಾಕುವುದಾಗಿ ಹೇಳಿದ್ದ
ಎಲ್ಲಾ ವಿದ್ಯಾರ್ಥಿಗಳ ಮುಂದೆ ಪ್ರಿನ್ಸಿಪಾಲ್ ನಿಂದಿಸಿದ್ದಾರೆ
ಹೀಗಾಗಿ ಆತ್ಮಹತ್ಯೆ ಮಾಡಿದ್ದಾಳೆ ಅಂತ ದೀಪ್ತಿ ತಂದೆ ಆರೋಪಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ