
Crime : ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Sunday, November 6, 2022
ಶಿವಮೊಗ್ಗದ ಅಶ್ವತ್ಥ್ ನಗರದಲ್ಲಿ ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ.
ಆಕಾಶ್ ಎಂಬ ಯುವಕನ ಜೊತೆ 5 ತಿಂಗಳ ಹಿಂದೆ ಮದುವೆಯಾಗಿದ್ದಳು. ನಿನ್ನೆ ರಾತ್ರಿ ತುಳಸಿ ಪೂಜೆ ಮುಗಿಸಿ, ಬಳಿಕ ಕಾರ್ ಶೆಡ್‍ನಲ್ಲಿ ನೇಣು ಬಿಗಿದು, ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.