-->

UDUPI : ಇಲಿ ಪಾಷಾಣ ಸೇವಿಸಿ ಮಹಿಳೆ ಆತ್ಮಹತ್ಯೆ

UDUPI : ಇಲಿ ಪಾಷಾಣ ಸೇವಿಸಿ ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ.ಬಿನ್ನಿ ಶೈಜು ಥೋಮಸ್ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 
ಬಿನ್ನಿ ಶೈಜು ಥೋಮಸ್, ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು, ಇವರು ಮಗಳೊಂದಿಗೆ ಗಂಡನ ಮನೆ ಹಂದಾಡಿ ಬೇಳೂರುಜೆಡ್ಡುಯಲ್ಲಿ ವಾಸವಾಗಿದ್ದರು. ಮನೆಯ 1ನೇ ಮಹಡಿಯಲ್ಲಿ ಅತ್ತೆ, ಮಾವ ಮನೆಯ ಕೆಳ ಅಂತಸ್ತಿನಲ್ಲಿ ಬಿನ್ನಿ ಶೈಜು ಬಿನ್ನಿ ಶೈಜು ಥೋಮಸ್ ವಾಸವಾಗಿದ್ದರು. ಅ.26 ರಂದು ರಾತ್ರಿ ಇಲಿಪಾಷ ಸೇವಿಸಿದ್ದರು, ಬಳಿಕ ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಬಳಲುತ್ತಿದ್ದವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರದ ಅಸ್ಪತ್ರೆಗೆ ಮನೆಯವರು ದಾಖಲು ಮಾಡಿದ್ದರು. ಬಳಿಕ ವೈದ್ಯರ ಸಲಹೆಯಂತೆ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿದರು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿನ್ನಿ ಶೈಜು ಥೋಮಸ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಒಬ್ಬರೇ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಇಲಿ ಪಾಷಣ ಸೇವಿಸಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99