
ಮತ್ತೆ ಮಾಯಮೃಗ ಭಾಗ 4- ಕಲ್ಯಾಣಿಯಲ್ಲಿ ಮುಳುಗಿ ಶಾಸ್ತ್ರೀಗಳ ಸಾವು- ಆತ್ಮಹತ್ಯೆ ಯೊ? ಕೊಲೆಯೊ?- ನಾಳೆ CSP ಹಾಜರ್!
Thursday, November 3, 2022
ಮತ್ತೆ ಮಾಯಮೃಗದ ನಾಲ್ಕನೇ ಭಾಗದಲ್ಲಿ ಮಾಳವಿಕ ಮತ್ತು ಮುಖ್ಯಮಂತ್ರಿ ಚಂದ್ರು ನಡುವಿನ ಮಾತಿನ ಸಮರ ಆರಂಭವಾಗಿದೆ. ಪೂರ್ವಿ ತನ್ನ ತಾತ ಮುಖ್ಯಮಂತ್ರಿ ಚಂದ್ರು ಜೊತೆಗೆ ನಾಟಕೀಯ ಪ್ರೀತಿ ತೋರಿಸಿ ಕಚೇರಿ ಕೆಲಸ ಅಂತ ಕಾಲ್ಕಿತ್ತಿದ್ದಾಳೆ. ಇತ್ತ ಮುಖ್ಯಮಂತ್ರಿ ಚಂದ್ರು ಹಳೆಯ ವಿಚಾರವನ್ನು ಕೆದಕಿದ್ದಾರೆ.
ಟೀಚರ್ ಮಂಜಪ್ಪ ಮನೆಗೆ ಬಂದು ಶಾಲೆಗೆ ಸಂಬಂಧಿಸಿದ ಕಾಗದ ಪತ್ರಗಳಿಗೆ ಸಹಿ ಹಾಕಿಸಿದ್ದಾರೆ. ಮಂಜಪ್ಪ ಟೀಚರ್ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಈಗ ಇರುವ ಮಗಳು ದತ್ತು ಮಗಳು ಎಂಬುದನ್ನು ತಿಳಿಸಿದ್ದಾಳೆ.ಪತಿ ಸಾಲ ಮರುಪಾವತಿಗಾಗಿ ಜರ್ಮನಿಗೆ ಹೋಗಿ ದುಡಿಯುತ್ತಿದ್ದಾರೆ.. ಇಷ್ಟನ್ನು ಮಂಜಪ್ಪರ ಬಳಿ ಹೇಳಿಕೊಂಡಿದ್ದಾಳೆ.
ಇತ್ತ ಶಾಸ್ತ್ರೀಗಳು ನಾಪತ್ತೆಯಿಂದ ಪತ್ನಿ ಆತಂಕಿತರಾಗಿದ್ದಾರೆ. ದೇವಸ್ಥಾನದ ಕಲ್ಯಾಣಿ ಬಳಿ ಶಾಸ್ತ್ರೀಯವರ ಟೋಪಿ ಸಿಕ್ಕಿದೆ ಎಂದು ಹುಡುಗನೊಬ್ಬ ಬಂದು ಶಾಸ್ತ್ರೀ ಪತ್ನಿಗೆ ಹೇಳಿದ್ದಾನೆ. ಶಾಸ್ತ್ರೀಯ ಪತ್ನಿಯ ಅನುಮಾನ ಜಾಸ್ತಿಯಾಗಿದೆ.
ಇನ್ನೂ ಮಂಜಪ್ಪರ ಮಗ ಅಮೇರಿಕಾದಿಂದ ಬಂದು ಹಾಕಿರುವ ತಂತ್ರಗಾರಿಕೆಯನ್ನು ಪತ್ನಿ ಜೊತೆಗೆ ಚರ್ಚಿಸಿದ್ದಾನೆ. ಇದರ ಜೊತೆಗೆ ಅಮೇರಿಕಾದ ವಿಚಾರ ಇಟ್ಟುಕೊಂಡು ಪತಿ ಪತ್ನಿ ಗಲಾಟೆ ಮಾಡಿಕೊಂಡಿದ್ದಾರೆ. ಅಮೇರಿಕದಲ್ಲಿ ಪಾಪರ್ ಆಗಿ ಬಂದ ಗಂಡ ಹೆಂಡತಿ ಮನೆಯ ದುಡ್ಡು ಪಡೆದು ಅಮೇರಿಕ ಹೋಗಲು ಪ್ಲ್ಯಾನ್ ಮಾಡಿದ್ದಾರೆ.
ಲಕ್ಷ್ಮೀನರಸಿಂಹ ಶಾಸ್ತ್ರಿಗಳನ್ನು ಹುಡುಕಿಕೊಂಡು ದೇವಸ್ಥಾನದ ಬಳಿ ಹೋದ ಶಾಸ್ತ್ರೀಗಳ ಪತ್ನಿಗೆ ಗುರುಗಳು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕಲ್ಯಾಣಿಯಲ್ಲಿ ಈಜುಗಾರರನ್ನು ಹುಡುಕಿಸಲು ನೆರವಾಗುತ್ತಾರೆ.ಕಲ್ಯಾಣಿಯಲ್ಲಿ ಶಾಸ್ತ್ರಿಗಳ ಲುಂಗಿ ಪತ್ತೆಯಾಗುತ್ತದೆ. ಅದು ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಂಕೇತ.ಅಲ್ಲಿಗೆ ಇಂದಿನ ಭಾಗ ಮುಕ್ತಾಯವಾಗುತ್ತದೆ.. ಶಾಸ್ತ್ರಿಗಳು ಸಾವನ್ನಪ್ಪಿದ್ದು ಹೇಗೆ? ಆತ್ಮಹತ್ಯೆ ಯೊ ಕೊಲೆಯೋ ಎಂಬುದು ಮುಂದೆ ತಿಳಿಯಲಿದೆ.
ಇಂದೂ ಕಾಣಿಸಿಕೊಂಡಿರದ ಸಿಎಸ್ ಪಿ ನಾಳೆ ಹಾಜರಾಗುತ್ತಿದ್ದಾರೆ.