
UDUPI : ಪಡುಕರೆ ತೀರದಲ್ಲಿ ರಾತ್ರಿ ಸುತ್ತಾಡಿದ್ರೆ ಎಚ್ಚರಿಕೆ..!
ಉಡುಪಿಯ ಪಡುಕರೆ ಕಡಲತೀರಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬಂದ ಪ್ರವಾಸಿಗರು, ರಾತ್ರೆ ವೇಳೆ ಕೂಡ ಪಡುಕರೆ ತೀರದಲ್ಲಿ ತಿರುಗಾಡುತ್ತಾ, ಕುಳಿತು ಹರಟೆ ಹೊಡೆಯುತ್ತಾ ಇರುತ್ತಾರೆ. ಹೀಗಾಗಿ ಇಲ್ಲಿನ ಕೆಲ ಸ್ಥಳೀಯರು ರಾತ್ರಿ ವೇಳೆ ಪಡುಕರೆ ಪರಿಸರದಲ್ಲಿ ತಿರುಗಾಡುದನ್ನು ನಿಷೇಧಿಸಿ ಎಚ್ಚರಿಕೆಯ ಬ್ಯಾನರ್ ಅಳವಡಿಸಿದ್ದಾರೆ.
ಪಡುಕರೆಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ದೃಷ್ಟಿಯಿಂದ, ನಾವು ನಿರ್ಣಯವೊಂದನ್ನು ಸ್ವೀಕರಿಸಿದ್ದು ಮಟ್ಟುವಿನಿಂದ ಶಾಂತಿನಗರದವರೆಗೆ ರಾತ್ರಿ ಗಂಟೆ 8:00ರಿಂದ ಬೆಳಗ್ಗೆ 6:00ರ ತನಕ ಯಾವುದೇ ಪ್ರವಾಸಿಗರು ಊರಿನಲ್ಲಿ ತಿರುಗಾಡುವುದು, ಬೀಜ್‌ನಲ್ಲಿ ಕೂರುವುದು ಕಡ್ಡಾಯವಾಗಿ ನಿಷೇದಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಮುಂದಾಗುವ ಯಾವುದೇ ಪ್ರತಿಕ್ರಿಯೆಗಳಿಗೆ ಊರಿನವರು ಹೊಣೆಯಾಗಿರುವುದಿಲ್ಲ ಅಂತ ಬ್ಯಾನರ್‌ನಲ್ಲಿ ಬರೆಯಲಾಗಿದೆ.