
UDUPI : ನೀರಿಗೆ ಬಿದ್ದ ಒಡಿಶಾದ ಮೀನುಗಾರಿಕಾ ಕಾರ್ಮಿಕನ ರಕ್ಷಣೆ
ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಕಸ್ಮಾತ್ತಾಗಿ ಕಾಲು ಜಾರಿ ನೀರಿಗೆ ಬಿದ್ದ ಕಾರ್ಮಿಕನನ್ನು ಸ್ಥಳೀಯರು ಮತ್ತು ಈಶ್ವರ್ ಮಲ್ಪೆ ರಕ್ಷಣೆ ಮಾಡಿದ್ದಾರೆ.
ಒಡಿಶಾದ ಮೀನು ಕಾರ್ಮಿಕ ಪ್ರಜ್ವಲ್ (35) ನೀರಿಗೆ ಬಿದ್ದವರು. ಮಲ್ಪೆ ಬಂದರಿನಲ್ಲಿ ಹೂಳು ತುಂಬಿದ್ದು ದಿನನಿತ್ಯ ಇಲ್ಲಿ ಪ್ರಾಣಾಪಾಯ ಸಂಭವಿಸುತ್ತಲೇ ಇರುತ್ತವೆ. ಹೂಳು ತೆಗೆಯುವ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸುವಂತೆ ಸಂಬಂಧಪಟ್ಟವರಿಗೆ ಆಪದ್ಭಾಂಧವ ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.