
UDUPI : ಆತಂಕ ಹುಟ್ಟಿಸಿದ ಕಾಳಿಂಗನನ್ನು ಹೇಗೆ ಸೆರೆ ಹಿಡಿದ್ರು ನೋಡಿ..!
Wednesday, October 12, 2022
ಉಡುಪಿ ಜಿಲ್ಲೆಯ ಕಾರ್ಕಳ ನಗರದ ಜನತೆಯಲ್ಲಿ ಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಸೆರೆಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇಲ್ಲಿನ ಅನಂತಶಯನ ತೆಳ್ಳಾರು ರಸ್ತೆಯ ವಕೀಲರ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು, ಇದನ್ನು ಗಮನಿಸಿದ ಸ್ಥಳೀಯರು, ಅನಿಲ್ ಪ್ರಭುರವರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ, ಉರಗ ತಜ್ಞರು ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಭುವನೇಂದ್ರ ಕಾಲೇಜಿನ ಸುತ್ತಮುತ್ತಲಿನಲ್ಲಿ ಇದೇ ಕಾಳಿಂಗ ಸರ್ಪ ಕಳೆದ ಎರಡು ತಿಂಗಳಿನಿಂದ ಕಾಣಿಸಿಕೊಂಡು, ಜನರಲ್ಲಿ ಆತಂಕ ಮೂಡಿಸಿತ್ತು. ಸುಮಾರು 14 ಅಡಿ ಉದ್ದದ ಕಾಳಿಂಗಸರ್ಪವನ್ನು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರವರ ಸಮ್ಮುಖದಲ್ಲಿ ಕುದುರೆಮುಖ ಅರಣ್ಯಕ್ಕೆ ಕೊಂಡೊಯ್ಯುದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.