UDUPI : ಬಾವಿಗೆ ಹಾರಿ ಆತ್ಮಹತ್ಯೆ ಮಾಡಕೊಂಡ ಪತ್ನಿ ; ಪತಿಯ ಮೇಲೆ ಕೌಟುಂಬಿಕರ ಅನುಮಾನ
Monday, October 10, 2022
ಪ್ರೀತಿಸಿ ಮದುವೆಯಾದ ನವವಿವಾಹಿತೆಯ ಮೃತದೇಹ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಉಡುಪಿಯ ಎಲ್ಲೂರಿನಲ್ಲಿ ನಡೆದಿದೆ. ರಕ್ಷಿತಾ ಪೂಜಾರಿ (24) ಸಾವನ್ಪಿದ ಯುವತಿ.
ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸವಿದ್ದರು, ಕಾಪುವಿನ ಪ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ಅ.3ರಂದು ಅಂಗಡಿಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ನಂತರ ನಾಪತ್ತೆಯಾಗಿದ್ದರು. ಇದಕ್ಕೂ ಮೊದಲು ರಕ್ಷಿತಾ ಪೂಜಾರಿ ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅದೇ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಆಚಾರಿಯನ್ನು ಪ್ರೀತಿಸಿ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಬಳಿಕ ರಕ್ಷಿತಾಳ ತಾಯಿ ಮೃತಪಟ್ಟ ಬಳಿಕ ತಂದೆ ಹಾಗೂ ಗಂಡನೊಂದಿಗೆ ಮನೆಯಲ್ಲಿದ್ದರು. ಅ. 3ರಂದು ನಾಪತ್ತೆಯಾಗಿದ್ದ ರಕ್ಷಿತಾಳ ಮೃತದೇಹ ಶನಿವಾರ ಮನೆ ಪಕ್ಕದ ಹಾಡಿಯೊಂದರ ಪಾಳು ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸಂಜಯ್ ಆಚಾರಿ ಮೇಲೆ ಸಂಶಯವಿದೆ ಎಂದು ಆಕೆಯ ಕುಟುಂಬಿಕರು ಪಡುಬಿದ್ರೆ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.