
UDUPI :ಕಡಲ ತೀರದಲ್ಲಿ ನೂರಾರು ತೊರಕೆ ಮೀನುಗಳು
ಉಡುಪಿ ಕಡಲ ತೀರದಲ್ಲಿ ಸದ್ಯ ಮೀನಿನ ಸುಗ್ಗಿ ನಡೆಯುತ್ತಿದೆ. ಇಲ್ಲಿನ ಕಾಪು ಮೂಳೂರು ಕಡಲ ತೀರದಲ್ಲಿ ದೊಡ್ಡ ದೊಡ್ಡ ನೂರಾರು ತೊರಕೆಗಳು ಮೀನುಗಳು ಮೀನುಗಾರ ಬಲೆಗೆ ಬಿದ್ದಿವೆ.
ಇಂದು ಬೆಳಗ್ಗೆ, ಮೀನುಗಾರರ ಬಲೆ ಸುಮಾರು 50 ಕೆಜಿಗೂ ಅಧಿಕ ಗಾತ್ರದ ನೂರಾರು ಮೀನುಗಳು ಬಲೆಗೆ ಬಿದಿದ್ದು, ತೊರಕೆ ಮೀನನ್ನು ಬಡಿಗೆಯಲ್ಲಿ ಕಟ್ಟಿ ಮೇಲಕ್ಕೆ ಸಾಗಿಸಿದರು.
ತೊರಕೆ ಮೀನಿಗೆ ಕೆಜಿಗೆ 250 ರಷ್ಟು ಬೇಡಿಕೆ ಇದ್ದು, ತೊರಕೆ ಮೀನುಗಳನ್ನು ನೋಡಲು ಸುತ್ತಮುತ್ತಲಿನ ನೂರಾರು ನಿವಾಸಿಗಳು ಕಡಲತೀರಕ್ಕೆ ಆಗಮಿಸಿದ್ದರು.