Cinema : ಶವವಾಗಿ ಪತ್ತೆಯಾದ ಖ್ಯಾತ ಚಿತ್ರ ನಟಿ ಆಕಾಂಕ್ಷಾ ಮೋಹನ್...! (video)
Saturday, October 1, 2022
ಹಿಂದಿ ಹಾಗೂ ತನಿಳು ಚಿತ್ರರಂಗದ ನಾಯಕಿ ಆಕಾಂಕ್ಷಾ ಮೋಹನ್ ಮುಂಬೈನ ವೆರ್ಸೋವಾದ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇತ್ತೀಚೆಗಷ್ಟೇ ಆಕಾಂಕ್ಷಾ ನಟನೆಯ ಹಿಂದಿ ಸಿನಿಮಾ ‘ಸಿಯಾ’ದ ಬಿಡುಗಡೆಯಾಗಿತ್ತು.
ಸೆಪ್ಟಂಬರ್ 28 ರಂದು ರೂಮ್ ಪಡೆದಿದ್ದ ಆಕಾಂಕ್ಷಾ ಮೋಹನ್, ಸೆ.30 ರಂದು ಶವವಾಗಿ ಪತ್ತೆಯಾಗಿದ್ದಾರೆ. ಆದರೆ, ಶವ ಸಿಕ್ಕ ಹೋಟೆಲ್‌ನ ರೂಮ್ ನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ತನ್ನ ಸಾವಿಗೆ ತಾನೇ ಕಾರಣ ಅಂತ ಬರೆದಿದ್ದರು.
ಎರಡು ದಿನಗಳ ಬಳಿಕವೂ ಲಾಡ್ಜ್ ರೂಮ್ ಬಾಗಿಲು ತೆರೆಯದೇ ಇರುವ ಕಾರಣಕ್ಕಾಗಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ ಆಕಾಂಕ್ಷಾ ಮೋಹನ್ ಶವವಾಗಿ ಪತ್ತೆಯಾಗಿದ್ದಾರೆ.