
UDUPI ; ರಸ್ತೆ ವಿಚಾರಕ್ಕೆ ಮಹಿಳೆ ಹಾಗೂ ಪಂಚಾಯತ್ ಸದಸ್ಯನ ನಡುವೆ ಘರ್ಷಣೆ ; ಮಹಿಳೆ ತಲೆಗೆ ಗಾಯ ಕೆರಿಯೆರ್ ಕೆರಿಯೆರ್ ವಿಡಿಯೋ ವೈರಲ್
Tuesday, September 6, 2022
ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಹಿಳೆ ನಡುವೆ ವಾಗ್ವಾದ, ಘರ್ಷಣೆ ನಡೆದು ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನಡೆದಿದೆ.
ಆರತಿಯವರ ಸೇರಿದೆ ಎನ್ನಲಾದ ಪಟ್ಟಾ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ವಿರೋಧದ ನಡುವೆಯೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು.
ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಆರತಿ ತನ್ನ ಚಪ್ಪಳಿಯಿಂದ ಅಲ್ಲಿದ್ದವರೊಬ್ಬರಿಗೆ ಹೊಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರನ್ನು ತಳ್ಳಿದ್ದಾರೆ. ಈ. ವೇಳೆ ಮಹಿಳೆಯ ತಲೆಗೆ ಗಾಯವಾಗಿದೆ. ಆರತಿ ಅವರು ಉಡುಪಿ ಜಿಲ್ಲಾ ಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಗಲಾಟೆ ಘರ್ಷಣೆ ವಿಡಿಯೋ, ಮಾಡಿದ ವ್ಯಕ್ತಿ ಕೆರಿಯೆರ್ ಕೆರಿಯೆರ್ ವಿಡಿಯೋ ವೈರಲ್ ಆಗಿದೆ.