UDUPI : ಕಾಲು ಜಾರಿ ಬಿದ್ದು ಮೀನುಗಾರ ಸಾವು
Monday, September 5, 2022
ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವನ್ಪಿದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ. ಹನುಮ ನಿಧಿ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದಮಲ್ಪೆ ತೊಟ್ಟಂ ಮೂಲದ ಪುರಂದರ ಸಾವನ್ಪಿದ ಮೀನುಗಾರ.
ಪುರಂದರ ಅವರು ರಾತ್ರಿ ಬೋಟ್ ನಿಂದ ಮೀನು ಖಾಲಿ ಮಾಡುವ ಸಂಧರ್ಭ ಕಾಲು ಜಾರಿ ಸಮುದ್ರಕ್ಕೆಬಿದ್ದಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಮುಳುಗು ತಜ್ಷ ಈಶ್ವರ್ ಮಲ್ಪೆ, ದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಪುರಂದರ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ತೊಟ್ಟಂ ಮೂಲದವರಾಗಿದ್ದ ಪುರಂದರ ಅವರು, ಸುಮಾರು 10 ವರ್ಷಗಳಿಂದ ಕಣ್ಣಿ ಪಾರ್ಟಿ ಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..