-->
UDUPI : ಬಂಗುಡೆ ಏಲಂ ಹಾಕಿದ ಯಕ್ಷಗಾನ ವೇಷಧಾರಿ

UDUPI : ಬಂಗುಡೆ ಏಲಂ ಹಾಕಿದ ಯಕ್ಷಗಾನ ವೇಷಧಾರಿ

ಕೃಷ್ಣನೂರು ಉಡುಪಿಯ ಜನ  ಗಣೇಶ ಹಬ್ಬದ ಸಾಗರದಿಂದ ಇನ್ನೂ ಹೊರ ಬಂದಿಲ್ಲ, ಹಬ್ಬದ ವೇಷಧಾರಿಗಳು ನಗರದ ನಾನಾ ಭಾಗದಲ್ಲಿ ಕಂಡು ಬರುತ್ತಿದ್ದಾರೆ. ಅದರಂತೆ ಮಲ್ಪೆ ಬಂದರಿಗೆ ಬಂಧ ಯಕ್ಷಗಾನ ವೇಷಧಾರಿಯೊಬ್ಬ ಮೀನು ಏಲಂ ನಡೆಸುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. 



ಮಲ್ಪೆಯಲ್ಲೀಗ ಭಾರೀ ಪ್ರಮಾಣದ ಮೀನು ಬರುತ್ತಿದೆ. ಜನ ಸಾಮಾನ್ಯರು ಖರೀದಿ ಮಾಡೋ ಬಂಗುಡೆ ಬೂತಾಯಿ ಡಿಸ್ಕೋ ಮೀನುಗಳು, ರಾಶಿ ರಾಶಿ ಸಿಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಕೂಗಲಾಗುತ್ತೆ. ಮೀನು ಏಲಂ ಕೂಗುವ ವೇಳೆ ಯಕ್ಷಗಾನ ವೇಷಧಾರಿಯೊಬ್ಬ ಬಂದರಿಗೆ ಬಂದಿದ್ದು, ಈ ವೇಳೆ ಬಂಗುಡೆ ಮೀನುಗಳನ್ನು ತಾನೇ ಏಲಂ ಕೂಗಿ ನೆರೆದಿದ್ದವರನ್ನು ರಂಜಿಸಿದ್ದಾನೆ. ಈತ ಏಲಂ ಕೂಗುವ ವಿಡಿಯೋವನ್ನು ಅಲ್ಲಿದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಕರಾವಳಿಯಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.


Ads on article

Advertise in articles 1

advertising articles 2

Advertise under the article