UDUPI : ಸಮುದ್ರದಲ್ಲಿ ಈಜುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವು
Monday, September 26, 2022
ಉಡುಪಿಯ ಹೂಡೆ ಬೀಚ್‌ನಲ್ಲಿ ಭಾನುವಾರ ಸಂಜೆ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಸಮುದ್ರ ಪಾಲಾಗಿದ್ದ ಮತ್ತೋರ್ವನ ಶವ ಇಂದು ಪತ್ತೆಯಾಗಿವೆ. ಬೆಂಗಳೂರಿನ ನಿಶಾಂತ್ (21) ಹಾಗೂ ಷಣ್ಮುಗ (21) ಹಾಗೂ ಶ್ರೀಕರ್ (21) ಸಾವನ್ಪಿದ ವಿದ್ಯಾರ್ಥಿಗಳು.
ಇವರೆಲ್ಲರು ಮಣಿಪಾಲದ ಐಸಿಎಎಸ್ ವಿದ್ಯಾರ್ಥಿಗಳು. ಮಣಿಪಾಲದ ಸುಮಾರು 15 ಮಂದಿ ವಿದ್ಯಾರ್ಥಿಗಳು ಹೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ತೆರಳಿದ್ದರು. ಕೆಲವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದ ವೇಳೆ ಮೂವರು ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಅವಘಡ ಸಂಭವಿಸಿತ್ತು. ಅದರಲ್ಲಿ ನಿನ್ನೆ ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತರಲಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇನ್ನೋರ್ವನ ಶವ ಇಂದು ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.