UDUPI : ಸೇತುವೆ ಬಳಿ ಬೈಕ್ ಇಟ್ಟು ಯುವಕ ನಾಪತ್ತೆ
Saturday, September 24, 2022
ಸೇತುವೆ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಪಡುಕರೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ ಶಿವ ನಾಪತ್ತೆಯಾದ ಯುವಕ.
ಮಲ್ಪೆ ಬೀಚ್ ಸಮೀಪದ ಪಡುಕರೆ ಸಮೀಪದ ಪಡುಕರೆ ಬೀಚ್‌ನಲ್ಲಿ ಬೈಕ್ ಕಂಡು ಬಂದಿದ್ದು, ಸ್ಥಳೀಯರು ಗಮನಿಸಿದಾಗ, ದಾವಣಗೆರೆ ಮೂಲದ ಶಿವನದ್ದು ಅಂತ ಗೊತ್ತಾಗಿದೆ. ಶಿವ ಬೈಕ್‌ನ್ನು ಸೇತುವೆ ಮೇಲೆ ಇಟ್ಟು ಪಾಪನಾಸಿನಿ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ನಾಪತ್ತೆಯಾದ ಶಿವನಿಗಾಗಿ ಸ್ಥಳೀಯ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.