ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆ- ಇವರ ನಾಪತ್ತೆಗೆ ಕಾರಣ ಇದು!
Saturday, September 24, 2022
ಮಂಗಳೂರು: ಮಂಗಳೂರಿನಲ್ಲಿ ಸೆಪ್ಟೆಂಬರ್ 21 ರಂದು ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಚೆನ್ನೈ ನಲ್ಲಿ ಪತ್ತೆಯಾಗಿದ್ದಾರೆ.
ಮಂಗಳೂರಿನ ಮೇರಿ ಹಿಲ್ ನ ವಿಕಾಸ ಕಾಲೇಜಿನ ಮೂವರು ಪಿ ಯು ಸಿ ವಿದ್ಯಾರ್ಥಿನಿಯರಾದ ಯಶಸ್ವಿನಿ ,ದಕ್ಷತಾ , ಸಿಂಚನಾ ನಾಪತ್ತೆಯಾಗಿದ್ದರು. ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಮುಂಜಾನೆ 3 ಗಂಟೆಗೆ ಕಿಟಕಿ ಮುರಿದು ಪರಾರಿಯಾಗಿದ್ದ ಇವರ ನಾಪತ್ತೆ ಆತಂಕ ಸೃಷ್ಟಿಸಿತ್ತು. ಇವರು ಹಾಸ್ಟೆಲ್ ನಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಮೂವರು ವಿದ್ಯಾರ್ಥಿನಿಯರು ಸೆಪ್ಟೆಂಬರ್ 23 ರಂದು ಚೆನ್ನೈ ಪೊಲೀಸ್ ಠಾಣೆಯಲ್ಲಿ ಹಾಜರಾಗುವ ಮೂಲಕ ಪತ್ತೆಯಾಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಮಂಗಳೂರಿನಿಂದ ಚೆನ್ನೈ ಗೆ ರೈಲಿನಲ್ಲಿ ಹೋಗಿದ್ದರು.ಅಲ್ಲಿ ಹೋದ ಬಳಿಕ ಇವರಿಗೆ ಮನೆಯವರಿಗೆ ಆತಂಕವಾಗಿರಬಹುದೆಂದು ಅರಿವಾಗಿದೆ.
ಆ ಬಳಿಕ ಅವರು ಚೆನ್ನೈ ಪೊಲೀಸ್ ಠಾಣೆಗೆ ತೆರಳಿ ತಾವು ಮಂಗಳೂರಿನಿಂದ ನಾಪತ್ತೆಯಾಗಿರುವುದನ್ನು ತಿಳಿಸಿದ್ದಾರೆ. ಆ ಬಳಿಕ ಚೆನ್ನೈ ಪೊಲೀಸರು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಚೆನ್ನೈನಿಂದ ಮೂವರು ವಿದ್ಯಾರ್ಥಿನಿಯರನ್ನು ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ನಾಪತ್ತೆಗೆ ಕಾರಣ ಇದು!
ಈ ಮೂವರು ನಾಪತ್ತೆಯಾಗಲು ಕಾರಣ ವಾದ್ದದ್ದು ಕಡಿಮೆ ಅಂಕ. ಪಿಯುಸಿ ಪ್ರಥಮ ವರ್ಷದಲ್ಲಿ ನಡೆದ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದು ವಿದ್ಯಾರ್ಥಿನಿಯರು ನಾಪತ್ತೆ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ಕಡಿಮೆ ಅಂಕ ಬಂದಿರುವುದರಿಂದ ಮನೆಯವರಿಗೆ ಹೇಗೆ ತಿಳಿಸುವುದು ಎಂಬ ಆತಂಕದಿಂದ ಇವರು ನಾಪತ್ತೆಯಾಗಲು ನಿರ್ಧರಿಸಿದ್ದರು.