UDUPI ; ಪಿಟ್ಟಿ ನಾಗೇಶ್ ಕೊಲೆ ಪ್ರಕರಣ : ಐವರು ಆರೋಪಿಗಳು ಖುಲಾಸೆ
Tuesday, September 6, 2022
ರೌಡಿ ಪಿಟ್ಟಿ ನಾಗೇಶ್ ಕುಕ್ಕಿಕಟ್ಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ಕೊಲೆ ಆರೋಪಿತರಾಗಿದ್ದ, ಮುನ್ನ ಯಾನೆ ರಿಚಾರ್ಡ್ ಮಸ್ಕರೇನಸ್ ಗರಡಿಮಜಲು, ಗುರು ಪ್ರಸಾದ್ ಶೆಟ್ಟಿ ಅಲೆವೂರು, ವಿಶ್ವ ಯಾನೆ ವಿಶ್ವನಾಥ ಕೊರಂಗ್ರಪಾಡಿ, ಸಂತೋಷ್ ಬೈಲೂರು, ಝಾಕೀರ್ ಹುಸೇನ್ ಕುಕ್ಕಿಕಟ್ಟೆ ಖುಲಾಸೆಗೊಂಡವರು.
ನ್ಯಾಯಾಲಯದಲ್ಲಿ ಪೂರಕ ಸಾಕ್ಷಿಗಳ ಅಧಾರಗಳ ಕೊರತೆಯಿಂದ ಅರೋಪಿಗಳ ಅರೋಪ ಸಾಬೀತು ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣದಲ್ಲಿದ್ದ ಅರೋಪಿಗಳನ್ನು ಖುಲಾಸೆಗೊಳಿಸಿದೆ. ಪಿಟ್ಟಿ ನಾಗೇಶ್ ರೌಡಿ ಶೀಟ್ ಆಗಿದ್ದು, ಸೆಪ್ಟೆಂಬರ್ 11, 2014 ರಂದು ಉದ್ಯಾವರದ ಹಲೀಮಾ ಸಾಬ್ಜು ಸಭಾಂಗಣದ ಮುಂದೆ ಕೊಲೆಯಾಗಿದ್ದ.