UDUPI : ರಸ್ತೆ ಬಿಟ್ಟು ಡಿವೈಡರ್ ಮೇಲೆರಿದ ಎಕ್ಸ್‌ಪ್ರೆಸ್ ಬಸ್
Saturday, September 17, 2022
ಬಾಲಕನನ್ನು ಬಚಾವ್ ಮಾಡಲು ಹೋಗಿ, ಖಾಸಗಿ ಬಸ್ ರಸ್ತೆಯ ಡಿವೈಡರ್ ಮೇಲೆರಿದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ APM ಖಾಸಗಿ ಬಸ್, ಕಟಪಾಡಿಯ ಸರ್ವಿಸ್ ರಸ್ತೆಯಲ್ಲಿ ಬರುತ್ತಿತ್ತು. ಈ ವೇಳೆ, ಸೈಕಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಮನೆಗೆ ಸರ್ವಿಸ್ ರಸ್ತೆಯಲ್ಲಿ ಕ್ರಾಸ್ ಮಾಡುತ್ತಿದ್ದ. ಈ ವೇಳೆ ಬಾಲಕನನ್ನು ಬಚಾವ್ ಮಾಡುವ ರಭಸದಲ್ಲಿ ಬಸ್ ರಸ್ತೆ ಪಕ್ಕದ ಡಿವೈಡರ್ ಮೇಲೆರಿದೆ. ಈ ವೇಳೆ ಬಾಲಕನಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನ ಗಾಜು ಪುಡಿಯಾಗಿದ್ದು, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನರ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.