
UDUPI : ತ್ರಾಸಿ- ಮರವಂತೆ ಕಡಲತೀರಲ್ಲಿ ಮೀನಿನ ಶವ ಪತ್ತೆ : ತೆರವುಗೊಳಿಸುವಂತೆ ಆಗ್ರಹ
ಉಡುಪಿಯ ತ್ರಾಸಿ- ಮರವಂತೆ ಕಡಲತೀರದ ಹೆದ್ದಾರಿ ಬದಿಯ ದಡದಲ್ಲಿ ದೊಡ್ಡ ಗಾತ್ರದ ಮೀನಿನ ಶವ ಕೆಲದಿನಗಳಿಂದ ಕೊಳೆತು ನಾರುತ್ತಿದ್ದರೂ ಮೀನುಗಾರಿಕಾ ಇಲಾಖೆ ಈ ಬಗ್ಗೆ ಗಮನ ಹರಿಸದೇ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 500 ಕೆಜಿ ತೂಕದ ಡಾಲ್ಫಿನ್ ಶವ ಎನ್ನಲಾಗಿದ್ದು, ತ್ರಾಸಿ ಮರವಂತೆ ಬೀಚಿನ ದಡದಲ್ಲಿ ತೇಲಿ ಬಂದು ಅಪ್ಪಳಿಸಿ ಬಿದ್ದಿದೆ. ಕಡಲ ದಡದ ತೀರಕ್ಕೆ ತಾಗಿಕೊಂಡೇ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತಿದೆ. ನೂರಾರು ಪ್ರವಾಸಿಗರು ಕಡಲತೀರ ವೀಕ್ಷಣೆ ಮಾಡುತ್ತಾರೆ. ಅವರಿಗೆಲ್ಲ ಈ ವಾಸನೆಯಿಂದ ದಡಕ್ಕೆ ಬಾರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ತಕ್ಷಣ ದುರ್ವಾಸನೆ ಬೀರುವ ಮೀನಿನ ಶವ ತೆರವುಗೊಳಿಸುವಂತೆ ಸ್ಥಳೀಯರು, ಪ್ರವಾಸಿಗರು ಆಗ್ರಹಿಸಿದ್ದಾರೆ..