-->

ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆ ತ್ಯಜಿಸಬೇಕು :  ಆಳ್ವಾಸ್ ನ POSH   ಕಾರ್ಯಕ್ರಮ ದಲ್ಲಿ ಡಾ. ಮೂಕಾಂಬಿಕಾ ಜಿ. ಎಸ್ ಕರೆ

ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆ ತ್ಯಜಿಸಬೇಕು : ಆಳ್ವಾಸ್ ನ POSH ಕಾರ್ಯಕ್ರಮ ದಲ್ಲಿ ಡಾ. ಮೂಕಾಂಬಿಕಾ ಜಿ. ಎಸ್ ಕರೆ

 ಮೂಡುಬಿದಿರೆ: ಹೆಣ್ಣು ಮಕ್ಕಳು ತಮಗೆ ಎಲ್ಲಾದರೂ ತೊಂದರೆ ಉಂಟಾದರೆ  ಧ್ವನಿ ಎತ್ತಿ ಮಾತನಾಡುವ ಧೈರ್ಯ ಹೊಂದಿರಬೇಕು ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಮೂಕಾಂಬಿಕಾ ಜಿ. ಎಸ್ ಹೇಳಿದರು

ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜು ಆಂತರಿಕ ನಿರ್ವಹಣಾ ಸಮಿತಿ ವತಿಯಿಂದ ನಡೆದ "Prevention of Sexual Harassment (POSH) ‘ಪೋಶ್’ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಮ್ಮಲ್ಲಿ ಹಲವಾರು ರೀತಿಯ ಕಾನೂನು ಕ್ರಮಗಳಿದ್ದರೂ ಲೈಂಗಿಕ ಕಿರುಕುಳ ಮಹಿಳೆಯರ ಮೇಲೆ ನಡೆಯುತ್ತಲೆ ಇದೆ.  ಮಹಿಳೆಯರ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಹಲವಿದ್ದರೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಡಿಮೆಯಾಗಲಿಲ್ಲ. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆ ತ್ಯಜಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, ೨೦೧೩ ಅಥವಾ ಪೋಶ್ ಕಾಯ್ದೆಯನ್ನು ಅಂಗೀಕರಿಸಿ, ಆ ಮೂಲಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಯಿತು.  ದೈಹಿಕ ಸ್ಪರ್ಶ ಮತ್ತು ಅದರ ಮುಂದುವರಿಕೆ, ಲೈಂಗಿಕ ಸಹಕಾರಗಳಿಗೆ ಬೇಡಿಕೆ ಅಥವಾ ಮನವಿ, ಲೈಂಗಿಕತೆಗೆ ಸಂಬAಧಿಸಿದ ಹೇಳಿಕೆಗಳು, ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಯಾವುದೇ ರೀತಿಯ ಲೈಂಗಿಕ, ಅನುಚಿತ ದೈಹಿಕ, ವಾಕ್ ಅಥವಾ ಇತರೆ ರೀತಿಯ ನಡವಳಿಕೆಗಳು ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾಕತ್ ಮಾತನಾಡಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಹ ಶಕ್ತಿ ಪ್ರತಿಯೊಬ್ಬ ಮಹಿಳೆಯರಲ್ಲಿ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಏನ್, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ವೇತಾ ಆರ್, ಹಿಂದಿ ವಿಭಾಗದ ಉಪನ್ಯಾಸಕಿ ಸಹನಾ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಆಂತರಿಕ ನಿರ್ವಹಣಾ ಸಮಿತಿಯ ಸಂಯೋಜಕಿ ಡಾ. ಸುಲತಾ ಸ್ವಾಗತಿಸಿ, ಉಪನ್ಯಾಸಕಿ ರೋಶನಿ ವಂದಿಸಿ, ಉಪನ್ಯಾಸಕಿ ಆಶಾ ನಿರೂಪಿಸಿದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99