-->

ಪುದುವಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆಯಿಂದ  "ಗುರು ಸದನ" ಸಭಾಂಗಣ ಉದ್ಘಾಟನೆ

ಪುದುವಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆಯಿಂದ "ಗುರು ಸದನ" ಸಭಾಂಗಣ ಉದ್ಘಾಟನೆ

ಬಂಟ್ವಾಳ : ಪುದುವಿನಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆಯಿಂದ  "ಗುರು ಸದನ" ಸಭಾಂಗಣ ಉದ್ಘಾಟನೆ
ಹಾಗೂ ಶ್ರೀ ಗುರುಗಳ  168 ,ನೆ ಜನ್ಮ ಜಯಂತಿ ಪ್ರಯುಕ್ತ ಭಜನಾ ಕಾರ್ಯಕ್ರಮ ಸೆ. 11  ರಂದು ಪುದು ಗ್ರಾಮದ ಕುಮ್ಡೇಲಿನಲ್ಲಿ  ನಡೆಯಿತು.


ಸೆ. 10 ರಂದು  ಗಣೇಶ್ ಭಟ್ ಪೌರೋಹಿತ್ಯದಲ್ಲಿ ಗಣಹೋಮ ನಡೆದರೆ, ಸೆ. 11 ರಂದು ಸ್ಥಳೀಯ ಹಿರಿಯ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ದೇವಕೀಕೃಷ್ಣ ಭಜನಾ ತಂಡ ಕುಮ್ಡೇಲು,ಶ್ರೀ ವೀರ ಹನುಮಾನ್ ಮಂದಿರ ಸುಜೀರು ದತ್ತನಗರ ಭಜನಾ ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.


 ಸಭಾ ಕಾರ್ಯಕ್ರಮದಲ್ಲಿ ಸುಜೀರು ಅರಸು ವೈದ್ಯನಾಥ ದೈವಗಳ ಪಾತ್ರಿಗಳಾದ  ಮುಂಡ ಯಾನೆ ಮೋನಪ್ಪ ಪೂಜಾರಿ, ನಾಗೇಶ್ ಕೋಟ್ಯಾನ್ ಮುಂಬಯಿ, ಕುಂಪಣಮಜಲು, ಜಗದೀಶ್ ಪೂಜಾರಿ ಬೊಳ್ಳನೆ,ವಿಶ್ವನಾಥ ಪೂಜಾರಿ ಕಬೇಲ, ಈಶ್ವರ ಪೂಜಾರಿ ಕಲಾಯಿ,ಭಾಸ್ಕರ ಪೂಜಾರಿ ಕಜಿಪಿತ್ಲ್,ನಾರಾಯಣ ಗುರು ಯುವ ವೇದಿಕೆ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸುದರ್ಶನ್ ಸುವರ್ಣ, ಶ್ರೀ ಸತೀಶ್ ಪೂಜಾರಿ ಸುಜೀರು, ಸಭಾಂಗಣಕ್ಕೆ ಸ್ಥಳಾವಕಾಶ ನೀಡಿದ ದಿ.ಮೋನಪ್ಪ ಅಮೀನ್ ಮಾರಿಪಳ್ಳ ಇವರ ಧರ್ಮಪತ್ನಿ ವಿಮಲ,ಮಕ್ಕಳಾದ  ನವೀನ್ ಕುಮಾರ್,  ಉದಯ್ ಕುಮಾರ್, ಸಂತೋಷ್ ಕುಮಾರ್ ,ಸಂಘದ ಮಾಜಿ ಅಧ್ಯಕ್ಷರುಗಳಾದ  ರಾಜೇಶ್ ಕಬೇಲ, ಶಂಕರ್ ಸುವರ್ಣ ಕುಂಪಣಮಜಲು, ಸುರೇಶ್ ಪೂಜಾರಿ ನಡುಬೈಲು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು, ಹಾಗೂ ಸಭಾಂಗಣಕ್ಕೆ ಸ್ಥಳಾವಕಾಶ ನೀಡಿದ  ವಿಮಲ ಅಮ್ಮನವರನ್ನು ಸನ್ಮಾನಿಸಿ ಗೌರವಿಸಲಾಯಿತು, ಸಂಘದ ಅಧ್ಯಕ್ಷರಾದ ಬಾಬು ಪೂಜಾರಿ (ಟೈಲರ್) ಸುಜೀರು ಕೊಡಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೃಜೇಶ್ ಅಂಚನ್ ಸುಜೀರು ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್ ಸುಜೀರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವಾಧ್ಯಕ್ಷರಾದ ನಾಗಪ್ಪ ಪೂಜಾರಿ ಕಬೇಲ, ಕೋಶಾಧಿಕಾರಿ ಅಶೋಕ್ ಹೊಯಿಗೆಗದ್ದೆ ಸಹಕರಿಸಿದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಪದ್ಮರಾಜ್ ಆರ್,ಕೋಶಾಧಿಕಾರಿ ಕುದ್ರೋಳಿ, ಉಮೇಶ್ ಸುವರ್ಣ ತುಂಬೆ,ತಾರನಾಥ ಕೊಟ್ಟಾರಿ ತೇವು,ಸಂತೋಷ್ ಗಾಂಭೀರ ಸುಜೀರುಗುತ್ತು,, ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮೋಹನ್ ಕುಲಾಲ್ ಸುಜೀರು ದೇವರಪಾಲು, ಪ್ರಕಾಶ್ಚಂದ್ರ ರೈ ದೇವಸ್ಯ,ಅಶೋಕ್ ಕಾವ ದೇವಸ್ಯ,ಮನೋಜ್ ಆಚಾರ್ಯ ನಾಣ್ಯ,ವಿಠ್ಠಲ್ ಸಾಲ್ಯಾನ್ ಕುಮ್ಡೇಲು, ರವೀಂದ್ರ ಕಂಬಳಿ ಸುಜೀರುಬೀಡು,ಗಣೇಶ್ ಸುವರ್ಣ ತುಂಬೆ,ಪದ್ಮನಾಭ ಶೆಟ್ಟಿ ಪುಂಚಮೆ,ಪ್ರತಾಪ್ ಆಳ್ವ ಸುಜೀರುಗುತ್ತು, ಸುರೇಂದ್ರ ಕಂಬಳಿ ಸುಜೀರು ಬೀಡು,ಗಣೇಶ್ ದತ್ತನಗರ,ನವೀನ್ ಕುಮಾರ್ (ಸುರಭಿ) ಕೊಡ್ಮಾಣ್,ಜಗದೀಶ್ ಕಡೆಗೋಳಿ, ಜಯಾನಂದ ಕಡೆಗೋಳಿ, ಸುರೇಶ್ ಕಡೆಗೋಳಿ,ಹಾಗೂ ಬಿಲ್ಲವ ಸಮಾಜದ ಹಿರಿಯರು, ಹಿತೈಷಿಗಳು ಆಗಮಿಸಿ 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99