ಹೆದ್ದಾರಿ ತಡೆದು PFI ಕಾರ್ಯಕರ್ತರ ಪ್ರತಿಭಟನೆ : ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಪೊಲೀಸರು
Thursday, September 22, 2022
ರಾಜ್ಯದ ಹಲವು ಕಡೆಗಳಲ್ಲಿ ಪಿಎಫ್ಐ ಹಾಗೂ ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ನಡೆಸಿದ ದಾಳಿ ಖಂಡಿಸಿ ಉಡುಪಿಯ ಕಾಪುವಿನಲ್ಲಿ ಹೆದ್ದಾರಿ ತಡೆದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಾವುದೇ ಪೊಲೀಸ್ ಅನುಮತಿ ಪಡೆಯದೆ ಹೆದ್ದಾರಿ ತಡೆ ನಡೆದು ಪ್ರತಿಭಟನೆ ನಡೆಸಿದ, ಪಿಎಫ್‌ಐ ಕಾರ್ಯಕರ್ತರ ವಿರುದ್ಧ, ಪೊಲೀಸರು ಗರಂ ಆದರು. ಈ ವೇಳೆ ಪಿಎಫ್ಐ ಜಿಲ್ಲಾಧ್ಯಕ್ಷ ಫಯಾಝ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥದ ಸ್ಥಳದಲ್ಲಿ ವಾತಾವರಣ ತಿಳಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಪೊಲೀಸ್ ಬಂದಾವಸ್ತ್ ಕೈಗೊಂಡಿದ್ದಾರೆ.