ಮಂಗಳೂರಿನಲ್ಲಿ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿನಿಯರು ಎಲ್ಲಿ ಹೋದರು?

ಮಂಗಳೂರು: ಮಂಗಳೂರಿನ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ  ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಿನ್ನೆ  ಪರಾರಿಯಾಗಿದ್ದು, ಎಲ್ಲಿಗೆ ಹೋಗಿದ್ದಾರೆ ಎಂಬುದೆ ಕಗ್ಗಂಟಾಗಿದೆ.


 

ನಗರದ  ವಿಕಾಸ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ನಿನ್ನೆ ಮುಂಜಾನೆ  ಮೂರು ಗಂಟೆಗೆ ಪರಾರಿಯಾಗಿದ್ದರು. ವಿಕಾಸ್ ಕಾಲೇಜಿನ ಹಾಸ್ಟೆಲ್ ನಲ್ಲಿದ್ದ ಯಶಸ್ವಿನಿ,ದಕ್ಷತಾ,ಸಿಂಚನಾ ಎಂಬವರು ಪರಾರಿಯಾಗಿದ್ದರು.   ಇವರು ಹಾಸ್ಟೆಲ್ ನ ಕಿಟಕಿಯನ್ನು  ಮುರಿದು   ಪರಾರಿಯಾಗಿದ್ದಾರೆ. ಇವರು ರಸ್ತೆಯಲ್ಲಿ ಬ್ಯಾಗ್ ಜೊತೆಗೆ ನಡೆದಾಡಿಕೊಂಡು ಹೋಗುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದು, ಯಶಸ್ವಿನಿ  ಮತ್ತು ದಕ್ಷತಾ ಬೆಂಗಳೂರು ಮೂಲದವರಾಗಿದ್ದಾರೆ.  ಇವರು ಮೂವರು ಪಿಯು ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.



ನಾವು ಹೋಗುತ್ತಿದ್ದೇವೆ,ಕ್ಷಮಿಸಿ ಅಂತಾ ಅವರು ಪತ್ರ ಬರೆದಿಟ್ಟು  ಪರಾರಿಯಾಗಿದ್ದರು.  ವಿದ್ಯಾರ್ಥಿನಿಯರು ಪರಾರಿಯಾದ ಬಳಿಕ ಅವರನ್ನು ಹುಡುಕಾಡುವ ಪ್ರಯತ್ನ ನಡೆಸಲಾಯಿತಾದರೂ ವಿದ್ಯಾರ್ಥಿನಿಯರು ಪತ್ತೆಯಾಗಿಲ್ಲ. ಏಕಾಏಕಿ ಮೂವರು ವಿದ್ಯಾರ್ಥಿನಿಯರು ಯಾಕೆ ಪರಾರಿಯಾದರು? ಅವರು ಎಲ್ಲಿ ಹೋಗಿದ್ದಾರೆ ಎಂಬುದು ಕಗ್ಗಂಟಾಗಿದೆ.