
ಆಳ್ವಾಸ್ ಯೋಗ ಆ್ಯಂಡ್ ನ್ಯಾಚುರೋಪತಿ: ರಾಷ್ಟ್ರಮಟ್ಟದ ಸಿಎಂಇ ಸಮಾರೋಪ
ಮೂಡುಬಿದಿರೆ: ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಪ್ರಯೋಜಕತ್ವದಲ್ಲಿ ಮಿಜಾರಿನ ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನಲ್ಲಿ ನ್ಯಾಚುರೋಪತಿ ಹಾಗೂ ಯೋಗ ಶಿಕ್ಷಕರಿಗೆ ನಡೆದ 6 ದಿನಗಳ ಸಿಎಂಇ (ಕಂಟಿನ್ಯೂ ಮೆಡಿಕಲ್ ಎಜುಕೇಶನ್) ರಾಷ್ಟç ಮಟ್ಟದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಯುಷ್ ಮಂತ್ರಾಲಯದ ಕೇಂದ್ರ ಯೋಗ ಹಾಗೂ ನ್ಯಾಚುರೋಪತಿ ಸಂಶೋಧನಾ ಕೌನ್ಸಿಲ್‌ನ ನಿರ್ದೇಶಕ ಡಾ. ರಾಘವೇಂದ್ರ ರಾವ್ ಮಾತನಾಡಿ, ಆಯುಷ್ ಇಲಾಖೆಯ ಯೋಜನೆಗಳ ಅರಿವು ವಿದ್ಯಾರ್ಥಿಗಳಿಗೆ ಅಗತ್ಯ. ಕಾಲೇಜಿನಲ್ಲಿ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸುವ ಮೂಲಕ ಸರ್ಕಾರದ ಅನುದಾನಗಳನ್ನು ಸದುಪಯೋಗಗೊಳಿಸಿ ಎಂದರು. ಯೋಗದ ಜನಪ್ರಿಯತೆಯಿಂದಾಗಿ ಪೃಕೃತಿ ಚಿಕಿತ್ಸೆಗೆ ಹೆಚ್ಚಿನ ಮಹತ್ವ ಸಿಗುತ್ತಿಲ್ಲ. ಆದ್ದರಿಂದ ನ್ಯಾಚುರೋಪತಿ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಯ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವನ್ನು ಹುಟ್ಟುಹಾಕಬೇಕು. ಉತ್ತಮ ನಾಯಕತ್ವ ಹಾಗೂ ನಿಖರ ಉದ್ದೇಶವಿದ್ದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಫಲರಾಗಲು ಸಾಧ್ಯ. ವಿದ್ಯಾರ್ಥಿಗಳು ತಂತ್ರಜ್ಞಾನಗಳನ್ನು ವೈದ್ಯಕೀಯ ಕ್ಷೇತ್ರವನ್ನು ಪ್ರಚಾರಪಡಿಸಲು ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಬಳಸಬೇಕು ಎಂದರು.
ಶಿಬಿರದಲ್ಲಿ ಭಾಗವಹಿಸಿದ ದೇಶದ ವಿವಿಧ ಭಾಗಗಳ ನ್ಯಾಚುರೋಪತಿ ಹಾಗೂ ಯೋಗ ಶಿಕ್ಷಕರಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಚೆನ್ನೈಯ ಸರ್ಕಾರಿ ಯೋಗ ಹಾಗೂ ನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಯೋಗ ಆ್ಯಂಡ್ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ್ವರನ್, ಶ್ರೀ ಪತಂಜಲಿ ಮಹರ್ಷಿ ನ್ಯಾಚುರೋಪತಿ ಆ್ಯಂಡ್ ಯೋಗ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಲಕ್ಷ್ಮೀಶ ಡಿ ಆರ್, ಮೈಸೂರಿನ ಸರ್ಕಾರಿ ನ್ಯಾಚುರೋಪತಿ ಹಾಸ್ಪಿಟಲ್‌ನ ಮೆಡಿಕಲ್ ಆಫಿಸರ್ ಡಾ. ಹರಿಗಣೇಶ್, ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ನಿತೇಶ್ ಶಿಬಿರದ ವರದಿ ವಾಚಿಸಿದರು, ಡಾ. ಜೀವನ ವಂದಿಸಿದರು. ವಿದ್ಯಾರ್ಥಿ ಅನಂತಕೃಷ್ಣ ನಿರೂಪಿಸಿದರು.